ಕಾರ್ಕಳ : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕ ಮತ್ತು ಕನ್ನಡ ಸಂಘ ಕಾರ್ಕಳ ಇವರ ಸಹಯೋಗದಲ್ಲಿ ಕಾರ್ಕಳ ಹೋಟೆಲ್ ಪ್ರಕಾಶ್ ಸಂಭ್ರಮ ಹಾಲ್ ಫೆ. 12ರಂದು ನಡೆಯಿತು. ನಾಟಕಕಾರ, ನಿರ್ದೇಶಕ ಎಸ್.ಎನ್. ಸೇತುರಾಮ್ ಮಾತನಾಡಿ, ಪ್ರತಿಯೊಬ್ಬ ಪ್ರಜೆಯೂ ಪ್ರಜ್ಞಾವಂತನಾಗಿದ್ದಾನೆ. ಆದರೆ, ಆಳುವ ಕೆಲವು ನಾಯಕರ ಅರ್ಥಹೀನ ತೀರ್ಮಾನಗಳನ್ನು ಮೌನವಾಗಿ ಒಪ್ಪಿಕೊಳ್ಳುತ್ತಾನೆ.
ಪ್ರತಿಯೊಬ್ಬರೂ ಪ್ರಜ್ಞಾಪೂರ್ವಕ ಚಿಂತನೆಯಲ್ಲಿ ಸಮಷ್ಟಿಯ ಹಿತದ ಬಗ್ಗೆ ಯೋಚಿಸಬೇಕು. ನಾಡಿನ ಹಿತಕ್ಕೆ ಉತ್ತಮ ಆಡಳಿತ ನೀಡಲು ಯೋಗ್ಯ ನಾಯಕರನ್ನೇ ಆಯ್ಕೆ ಮಾಡಬೇಕು. ಇಲ್ಲಿ ಪೂರ್ವಾಗ್ರಹದ ಮಮತೆ, ಜಾತಿ ಪ್ರೀತಿ ಗಣನೆಗೆ ತೆಗೆದುಕೊಳ್ಳದೇ ರಾಜ್ಯದ ಹಿತದೃಷ್ಟಿಯಿಂದ ಪ್ರಜಾಪ್ರಭುತ್ವದ ಮೌಲ್ಯ ಎತ್ತಿಹಿಡಿಯಬೇಕೆಂದರು.
ವೇದಿಕೆಯಲ್ಲಿ ನಾಡಿನ ಹಿರಿಯ ಸಾಹಿತಿ ಕನ್ನಡ ಸಂಘ ಕಾಂತಾವರ ಸ್ಥಾಪಕಾಧ್ಯಕ್ಷ ಡಾ ನಾ ಮೊಗಸಾಲೆ ಅಭಾಸಾಪ ಘಟಕದ ಗೌರವಾಧ್ಯಕ್ಷ ಎಸ್ ನಿತ್ಯಾನಂದ ಪೈ ಅಧ್ಯಕ್ಷ ಮಿತ್ರಪ್ರಭಾ ಹೆಗ್ಡೆ ಉಪಸ್ಥಿತರಿದ್ದರು. ಅಭಾಸಾಪ ಕಾರ್ಯದರ್ಶೀ ಗಣೇಶ್ ಜಾಲ್ಸೂರು ಸ್ವಾಗತಿಸಿ ಕನ್ನಡ ಸಂಘದ ಕಾರ್ಯದರ್ಶಿ ಸದಾನಂದ ನಾರವಿ ಧನ್ಯವಾದವಿತ್ತರು ಶಿಕ್ಷಕ ಸಂಜಯ್ ಕುಮಾರ್ ನಿರೂಪಿಸಿದರು ಅನೇಕ ಸಾಹಿತ್ಯಾಸ್ತಕ ಮಂದಿಗಳು ಉಪಸ್ಥಿತರಿದ್ದರು
ನಾಡಿನ ಹಿತಕ್ಕಾಗಿ ಯೋಗ್ಯ ನಾಯಕರನ್ನೇ ಆರಿಸಬೇಕು : ಎಸ್. ಎನ್. ಸೇತುರಾಮ್
Recent Comments
ಕಗ್ಗದ ಸಂದೇಶ
on