ಹಿಜಾಬ್ ವಿವಾದ : ಉಡುಪಿ ಶಾಸಕ ರಘುಪತಿ ಭಟ್​ಗೆ ಜೀವ ಬೆದರಿಕೆ ಕರೆ

ಉಡುಪಿ : ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಉಡುಪಿ ಶಾಸಕ ರಘುಪತಿ ಭಟ್​ಗೆ ಜೀವ ಬೆದರಿಕೆ ಕರೆ ಬಂದಿವೆ ಎನ್ನಲಾಗಿದೆ. ಈ ಕುರಿತಂತೆ ಸ್ವತಃ ಉಡುಪಿ ಶಾಸಕ ಕೆ. ರಘುಪತಿ ಭಟ್ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್ ವಿಚಾರದ ನಂತರ ತನಗೆ ಅಂತರ್ಜಾಲದ ಮೂಲಕ ಬೆದರಿಕೆ ಕರೆಗಳು ಬಂದಿವೆ. ಆದರೆ ನಾನು ಜಿಲ್ಲಾ ಪೊಲೀಸರಿಂದ ಯಾವುದೇ ಗನ್ ಮ್ಯಾನ್‌ಗಾಗಿ ಬೇಡಿಕೆ ಇಟ್ಟಿಲ್ಲ. ಹಿಜಾಬ್ ಬಗ್ಗೆ ತಮ್ಮ ನಿಲುವನ್ನು ಅನೇಕ ಮುಸ್ಲಿಮರು ಸಹ ಬೆಂಬಲಿಸಿರುವುದರಿಂದ ಅಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ.

error: Content is protected !!
Scroll to Top