ಉಡುಪಿ: ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ಹಿಜಾಬ್ ವಿವಾದ ಆರಂಭವಾದ ಹಿನ್ನೆಲೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ತನಿಖೆಗೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ವಿವಾದದ ಹಿಂದೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೈವಾಡವಿದೆ ಎಂದು ನಾವು ಶಂಕಿಸಿದ್ದೆವು, ಆದರೆ ಇದೀಗ ಕಾಂಗ್ರೆಸ್ ಕೂಡ ಭಾಗಿಯಾಗಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ಇದು ಹಿಜಾಬ್ ಧರಿಸಲು ಒತ್ತಾಯಿಸಲು ವಿದ್ಯಾರ್ಥಿಗಳು ರೂಪಿಸಿದ ಸಂಚು ಅಲ್ಲ, ಬದಲಿಗೆ ಸಿಎಫ್ಐನ ಸಂಚಾಗಿದೆ. “ಹಿಜಾಬ್ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸುವಂತೆ ನಾನು ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ. ಇದು ಉತ್ತಮ ಕಾರ್ಯತಂತ್ರವಾಗಿದೆ ಎಂಬ ಖಾತ್ರಿಯಿದ್ದು, ಹಿಜಾಬ್ ವಿವಾದದಿಂದ ದೇಶಕ್ಕೆ ಅಪಾಯವಿದೆ ಎಂಬ ಭಯ ನನಗಿದೆ. ಹಾಗಾಗಿ ಎನ್ಐಎಯಿಂದ ವಿಸ್ತೃತ ತನಿಖೆ ನಡೆಯುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಜಿಲ್ಲಾ ಮುಸ್ಲಿಂ ಒಕ್ಕೂಟವು ತರಗತಿಯಲ್ಲಿ ಹಿಜಾಬ್ಗೆ ಅವಕಾಶ ನೀಡಬೇಕೆಂದು ನಿರ್ಣಯವನ್ನು ಅಂಗೀಕರಿಸಿದೆ. ಅದು ಅವರ ಆಗ್ರಹವಾಗಿರಬಹುದು ಮತ್ತು ಆಗ್ರಹಿಸುವ ಹಕ್ಕು ಅವರಿಗಿದೆ. ಜಿಲ್ಲಾ ಮುಸ್ಲಿಂ ಒಕ್ಕೂಟದ ಮುಸ್ಲಿಂ ಮುಖಂಡರು ಪ್ರಕರಣಕ್ಕೆ ಪ್ರಚೋದನೆ ನೀಡಿಲ್ಲ. “ಉಡುಪಿ ಜಿಲ್ಲೆಯ ಮುಸ್ಲಿಮರು ಶಾಂತಿಯುತವಾಗಿ ಬದುಕಲು ಬಯಸುತ್ತಾರೆ, ಆದರೆ ಹೊರಗಿನವರು ವಿವಾದವನ್ನು ಪ್ರಚೋದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸರಣಿ ಟ್ವೀಟ್ ಮಾಡಿರುವ ರಘುಪತಿ ಭಟ್ ಅವರು, ಸಿಎಫ್ಐ ವಿದ್ಯಾರ್ಥಿಗಳಲ್ಲಿ “ಮತಾಂಧತೆಯ ಭಾವನೆಯನ್ನು” ಹುಟ್ಟುಹಾಕುವ ಮತ್ತು ತರಗತಿಯಲ್ಲಿ ಹಿಜಾಬ್ಗೆ ಬೇಡಿಕೆಯಿಡುವ ಮೂಲಕ ವಿವಾದ ದಾರಿ ಮಾಡಿಕೊಟ್ಟಿದ್ದು, ಇದು ಉದ್ದೇಶಪೂರ್ವಕವಾಗಿದೆ ಎಂದು ಆರೋಪಿಸಿದ್ದಾರೆ.
ಹಿಜಾಬ್ ವಿವಾದ ಎನ್ಐಎ ತನಿಖೆಗೆ ನೀಡಿ: ಉಡುಪಿ ಶಾಸಕ ರಘುಪತಿ ಭಟ್ ಆಗ್ರಹ
Recent Comments
ಕಗ್ಗದ ಸಂದೇಶ
on