ಜ್ಯೋತಿ ಯುವಕ – ಮಹಿಳಾ ಮಂಡಲ ವಜ್ರಮಹೋತ್ಸವ : ಕಾರ್ಕಳದಲ್ಲಿ ತುಳು‌ ನಾಟಕ ಸ್ಪರ್ಧೆ

ಕಾರ್ಕಳ : ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲ ಕಾಳಿಕಾಂಬ ಇದರ ವಜ್ರಮಹೋತ್ಸವದ ಪ್ರಯುಕ್ತ ಫೆ. 20 ರಿಂದ ರಾಜ್ಯ ಮಟ್ಟದ ತುಳು ನಾಟಕ ಸ್ಪರ್ಧೆಯನ್ನು ಕಾಳಿಕಾಂಬ ಜ್ಯೋತಿ ಮೈದಾನದಲ್ಲಿ ಆಯೋಜಿಸಲಾಗಿದೆ.
ಅವಿಭಜಿತ ದ.ಕ. ಜಿಲ್ಲೆಯ ಆಯ್ದ 6 ತಂಡಗಳು ‌ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ವಿಜೇತರಿಗೆ ಫೆ. 27 ರಂದು ವಜ್ರಮಹೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವುದು.
ಪ್ರಥಮ ಬಹುಮಾನ ರೂ. 20,202, ದ್ವಿತೀಯ ರೂ. 15,505, ತೃತೀಯ ರೂ. 10,101 ಹಾಗೂ ಮೂರು ಪ್ರೋತ್ಸಾಹಕ ನಗದಿನೊಂದಿಗೆ ಬಹುಮಾನ ಟ್ರೋಫಿ ನೀಡಲಾಗುವುದು. ಉತ್ತಮ ನಿರ್ದೇಶನ, ನಟ-ನಟಿ, ಸಂಗೀತ, ಬೆಳಕು,‌ ರಂಗ ಪರಿಕರ, ವಸ್ತ್ರಾಲಂಕಾರ ಮತ್ತು ಪ್ರಸಾದನ ಮೊದಲಾದ ವೈಯಕ್ತಿಕ ಪ್ರಶಸ್ತಿಗಳಿಗೆ ನಗದು ಮತ್ತು ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.

ಸ್ಪರ್ಧೆಯಲ್ಲಿ ‌ಭಾಗವಹಿಸುವ ನಾಟಕದ ತಂಡಗಳ ವಿವರ

ಫೆ. 20 ರಿಂದ ಕ್ರಮವಾಗಿ, ಪಿಂಗಾರ ಕಲಾವಿದರು ಬೆದ್ರ ತಂಡದ ಕಾಲ ಕಲ್ಜಿಗಾ, ಸಿಂಧೂರ ಕಲಾವಿದರು ಕಾರ್ಕಳ ತಂಡದ ಪನೊಡಿತ್ತ್೦ಡ್‌ ಸ್ವಾರಿ, ಭೂಮಿಗೀತಾ ಸಾಂಸ್ಕೃತಿಕ ವೇದಿಕೆ ಪಟ್ಲ ತಂಡದ ಈದಿ, ಜರ್ನಿ ಥೇಟರ್ ಗ್ರೂಪ್ ಮಂಗಳೂರು ತಂಡದ ಆದಿ ಅಳವುದ ಸಾದಿ, ಕರಾವಳಿ ಕಲಾವಿದರು ಮಲ್ಪೆ ತಂಡದ ಗಾವುದ ಪುಂಚ, ಸುಮನಸಾ ಕೊಡವೂರು ಉಡುಪಿ ತಂಡದ ಕಾಪ ಮೊದಲಾದ ನಾಟಕಗಳು ಪ್ರದರ್ಶನಗೊಳ್ಳಲಿದೆ ಎಂದು ಯುವಕ ಮಂಡಲದ ಅಧಕ್ಷ ಶುಭದರಾವ್, ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಶಿವದೇವಾಡಿಗ ಮಹಿಳಾ ಮಂಡಲದ ಅಧ್ಯಕ್ಷೆ ಅನಿತಾ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























































































































































































































error: Content is protected !!
Scroll to Top