Wednesday, July 6, 2022
spot_img
Homeಸುದ್ದಿಕೌನ್ಸಿಲರ್‌ ಅವರಿಂದ ಸರಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ

ಕೌನ್ಸಿಲರ್‌ ಅವರಿಂದ ಸರಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ

ಕಾರ್ಕಳ : ಕಾಬೆಟ್ಟು ಜಂಕ್ಷನ್‌ ಬಳಿ ಪುರಸಭಾ ಸದಸ್ಯೆ ರೆಹಮತ್‌ ಅವರು ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಇದನ್ನು ಕೂಡಲೇ ಸ್ಥಗಿತಗೊಳಿಸುವಂತೆ ಪುರಸಭಾ ಮುಖ್ಯಾಧಿಕಾರಿಯವರಿಗೆ ಸುಜಿತ್‌ ಸಫಳಿಗ ದೂರು ನೀಡಿರುತ್ತಾರೆ.
ಈ ಹಿಂದೆ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುವ ಸಂದರ್ಭ ಸಾರ್ವಜನಿಕರ ಆಕ್ಷೇಪದ ಮೇರೆಗೆ ಕಟ್ಟಡ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಕಟ್ಟಡ ನಿರ್ಮಾಣ ಕಾರ್ಯ ಮಾಡಲಾಗುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಫೆ. 11ರಂದು ಸುಜಿತ್‌ ಅವರು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಮುಖ್ಯಾಧಿಕಾರಿಯವರಲ್ಲಿ ಮಾತನಾಡಿಸಿದಾಗ, ನಂದಿನಿ ಹಾಲಿನ ಸ್ಟಾಲ್‌ ತೆರೆಯುವ ನಿಟ್ಟಿನಲ್ಲಿ ಕೆಎಂಎಫ್‌ ಹಾಗೂ ಟಿಎಂಸಿ ಜೊತೆ ಒಪ್ಪಂದವಾಗಿದೆ. ಈ ಕುರಿತು ಪುರಸಭಾ ಸಭೆಯಲ್ಲೂ ನಿರ್ಣಯವಾಗಿದೆ ಎಂದು ತಿಳಿಸಿರುತ್ತಾರೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!