ಕಾರ್ಕಳ : ಎಎಸ್ಆರ್ ಫರ್ನಿಚರ್ಸ್ ಮತ್ತು ಇಲೆಕ್ಟ್ರಾನಿಕ್ಸ್‌ನ ನೂತನ ಮಳಿಗೆ ಅನಂತಶಯನದ ಎಸ್.ಎಸ್. ಕಾಂಪ್ಲೆಕ್ಸ್ ನಲ್ಲಿ ಫೆ.11ರಂದು ಶುಭಾರಂಭಗೊಂಡಿತು. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ದೀಪ ಬೆಳಗಿಸಿ ಸಂಸ್ಥೆಗೆ ಚಾಲನೆ ನೀಡಿದರು.

ಫರ್ನಿಚರ್ಸ್ ಮತ್ತು ಇಲೆಕ್ಟ್ರಾನಿಕ್ಸ್, ಗೃಹೊಪಯೋಗಿ ವಸ್ತುಗಳ ಮಾರಾಟ ಮಳಿಗೆಯಾಗಿರುವ ಸಂಸ್ಥೆಯಲ್ಲಿ ಶುಭಾರಂಭದ ಪ್ರಯುಕ್ತ ಎಲ್ಲಾ ಗೃಹೊಪಯೋಗಿ ವಸ್ತುಗಳ ಮೇಲೆ ಗ್ರಾಹಕರಿಗೆ ವಿಶೇಷ ರಿಯಾಯಿತಿಯಿದೆ ಎಂದು ಸಂಸ್ಥೆಯ ಮಾಲಕ ಸಮಿತ್ ರಾಜ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕ್ವಾರಿ & ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಮಹೇಶ್ ಶೆಟ್ಟಿ ಬೈಲೂರು, ದೇವಕಿ ಪೂಜಾರಿ, ಆಶಾ ಮೊದಲಾದವರು ಉಪಸ್ಥಿತರಿದ್ದರು.