Thursday, May 26, 2022
spot_img
Homeಸುದ್ದಿಗ್ರಾಮ ಪಂಚಾಯತ್‌ ಸದಸ್ಯ ಪಿಡಿಒ ಅವರಿಗೆ ಬೆದರಿಕೆ

ಗ್ರಾಮ ಪಂಚಾಯತ್‌ ಸದಸ್ಯ ಪಿಡಿಒ ಅವರಿಗೆ ಬೆದರಿಕೆ

ಕಾರ್ಕಳ : ಸಾಮಾಜಿಕ ನ್ಯಾಯ ಸಮಿತಿಯಲ್ಲಿ ದೂರಿನ ವಿಚಾರಣೆ ನಡೆಯುತ್ತಿದ್ದ ಸಂದರ್ಭ ಉಮೇಶ್‌ ಕಲ್ಲೊಟ್ಟೆ ಎಂಬಾತ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರು ಹಾಗೂ ಪಿಡಿಒ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಡಾರು ಗ್ರಾ.ಪಂ. ಸದಸ್ಯ ಮಲ್ಲಿಕಾರ್ಜುನ ಅವರು ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾರೆ. ಜ.೧೯ ರಂದು ಮುಡಾರು ಗ್ರಾಮದ ಗಣೇಶ್ ಶೆಟ್ಟಿ ಎಂಬ ವ್ಯಕ್ತಿ ತನ್ನ ಕೃಷಿ ಜಾಗಕ್ಕೆ ಹೋಗುವ ನೀರಿನ ಪೈಪನ್ನು ವಿಲ್ಸನ್ ಪಿ.ಎಂ. ಎಂಬಾತ ಕಡಿದು ಹಾಕಿರುವ ಬಗ್ಗೆ ಮುಡಾರು ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಗೆ ದೂರು ನೀಡಿದ್ದು, ಫೆ. ೭ ರಂದು ವಿಚಾರಣೆಗೆ ಬರಲು ಇಬ್ಬರಿಗೂ ತಿಳಿಸಲಾಗಿತ್ತು. ಅದರಂತೆ ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿ ಇರುವಾಗ ದೂರುದಾರ ಗಣೇಶ್ ಶೆಟ್ಟಿಯವರೊಂದಿಗೆ ಬಂದಿದ್ದ ಉಮೇಶ್ ಕಲ್ಲೊಟ್ಟೆ ಎಂಬಾತ ನಾನು ಗಣೇಶ್ ಶೆಟ್ಟಿ ಅವರ ಪರವಾಗಿ ಬಂದಿದ್ದೇನೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನನಗೆ ಮತ್ತು ಪಿಡಿಒ ಅವರಿಗೆ ಬೆದರಿಕೆ ಹಾಕಿರುತ್ತಾರೆ ಎಂದು ಮಲ್ಲಿಕಾರ್ಜುನ ಅವರು ದೂರಿನಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!