ಕಾರ್ಕಳ : ಕಾಂಗ್ರೆಸ್ ಮುಖಂಡ ಅಯೂಬ್ ಖಾನ್ ಬಿಜೆಪಿ ಟೀಕಿಸುವ ಭರದಲ್ಲಿ ಇತಿಹಾಸ ಪ್ರಸಿದ್ಧ ಬಾಹುಬಲಿ ಸ್ವಾಮಿಯನ್ನು ನಿಂದಿಸಿರುವುದು ದುರದಷ್ಟಕರ. ಜೈನರ ಆರಾಧ್ಯ ದೇವರನ್ನು ಅವಮಾನಿಸುವ ಮೂಲಕ ಕಾಂಗ್ರೆಸ್ ನ ಇನ್ನೊಂದು ಮುಖವಾಡ ಕಳಚಿ ಬಿದ್ದಿದೆ. ಟಿಪ್ಪು ಸುಲ್ತಾನ್ ದಿನಾಚರಣೆ, ಹಿಜಾಬ್ ಅನಂತರ ಬಾಹುಬಲಿ ಸ್ವಾಮಿಗೆ ಚಡ್ಡಿ ಹಾಕಿ ಅನ್ನುವ ಮೂಲಕ ಸಮಸ್ತ ಜನರ ಭಾವನೆಗಳಿಗೆ ಘಾಸಿ ಮಾಡಿದೆ. ಅಹಿಂಸಾ ತತ್ವವನ್ನು ಪಾಲಿಸಿ ಸಮಾಜಮುಖಿ ಕೆಲಸ ಮಾಡುವ ಜೈನ ಸಮುದಾಯದ ಅವಹೇಳನ ಕಾಂಗ್ರೆಸ್ಸಿಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್ ನ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕಾಂಗ್ರೆಸ್ ಅನ್ನು ಕಾಂಗ್ರೆಸ್ಸೇ ನಿರ್ನಾಮ ಮಾಡುವ ದಿನ ದೂರವಿಲ್ಲ. ದೇಶದ ಸಂಸ್ಕೃತಿಯನ್ನು ಉಳಿಸುವ, ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡುವ ಪಕ್ಷ ಮುಂದಿನ ದಿನದಲ್ಲಿ ಸಮಸ್ತ ಹಿಂದು ಹಾಗೂ ಜೈನ ಬಾಂಧವರಿಗೆ ಆಶಾದಾಯಕವಾಗಲಿದೆ. ಕಾಂಗ್ರೆಸ್ ಬೆಂಬಲಿಸುವವರು ಈ ಕುರಿತು ಆತ್ಮಾವತ್ಮವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ತಿಳಿಸಿದರು.
ಅಯೂಬ್ ಖಾನ್ ಬಾಹುಬಲಿ ಸ್ವಾಮಿ ನಿಂದಿಸಿರುವುದು ದುರದೃಷ್ಟಕರ – ಮಹಾವೀರ ಹೆಗ್ಡೆ
