ಬೆಂಗಳೂರು: ಭವಿಷ್ಯದಲ್ಲಿ ಭಗವಾಧ್ವಜವೇ ರಾಷ್ಟ್ರ ಧ್ವಜ ಆಗಬಹುದು ಎಂದು ಸಚಿವ ಕೆ. ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಫೆ. 9 ರಂದುವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಸರಿ ಧ್ವಜವನ್ನು ಜಗತ್ತಿನಲ್ಲಿ ಎಲ್ಲಿ ಬೇಕಾದ್ರೂ ಹಾರಿಸುತ್ತೇವೆ. ಈ ಹಿಂದೆ ರಾಮಚಂದ್ರ, ಮಾರುತಿ ರಥದ ಮೇಲೆ ಕೇಸರಿ ಧ್ವಜ ಇತ್ತು. ಈಗ ರಾಷ್ಟ್ರ ಧ್ವಜ ಫಿಕ್ಸ್ ಆಗಿದೆ. ರಾಷ್ಟ್ರ ಧ್ವಜಕ್ಕೆ ಅನ್ನ ತಿನ್ನುವ ಪ್ರತಿಯೊಬ್ಬನೂ ಗೌರವ ಕೊಡಬೇಕು ಇಲ್ಲವಾದಲ್ಲಿ ಆತ ರಾಷ್ಟ್ರ ದ್ರೋಹಿ ಆಗುತ್ತಾನೆ ಎಂದು ಈಶ್ವರಪ್ಪ ಹೇಳಿದ್ದಾರೆ. ಯಾವತ್ತೋ ಒಂದು ದಿನ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುತ್ತೇವೆ ಅಂದಾಗ ನಗುತ್ತಿದ್ದರು. ಈಗ ಕಟ್ಟುತ್ತಿದ್ದೇವೆ. ಹಾಗೆಯೇ ಇನ್ನು ಹಲವು ವರ್ಷದ ನಂತರ ಭಾಗವಾಧ್ವಜವೇ ರಾಷ್ಟ್ರ ಧ್ವಜ ಆಗಬಹುದು. ಆಗ ಆ ಧ್ವಜ ಎಲ್ಲಿ ಬೇಕಾದರೂ ಹಾರಬಹುದು.
ಲೋಡ್ಗಟ್ಟಲೆ ಕೇಸರಿ ಶಾಲ್ಗಳನ್ನು ಬಿಜೆಪಿಯವರು ಕಳಿಸಿದ್ದಾರೆ ಎಂಬ ಡಿ. ಕೆ. ಶಿವಕುಮಾರ್ ಆರೋಪ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಸಚಿವ ಕೆ. ಎಸ್. ಈಶ್ವರಪ್ಪ, ಎಷ್ಟು ಲೋಡ್ ಕೇಸರಿ ಶಾಲು ಕಳಿಸಿದ್ದೇವೆ ಎಂಬ ಲೆಕ್ಕ ಡಿಕೆಶಿ ಬಳಿ ಇರಬಹುದು. ಆದರೆ ಕೇಸರಿ ಶಾಲು ಹಂಚಿರುವುದರಲ್ಲಿ ತಪ್ಪೇನಿಲ್ಲ. ಭಾರತದಲ್ಲಿ ಕೇಸರಿ ಧ್ವಜ ಸ್ವಾತಂತ್ರ್ಯ ಪೂರ್ವದಲ್ಲಿ ಸಾವಿರಾರು ಜನರಿಗೆ ಸ್ಪೂರ್ತಿ ಕೊಟ್ಟಿತ್ತು. ಅದು ಧರ್ಮದ ಸಂಕೇತ. ಕೇಸರಿ ಅಂದ ತಕ್ಷಣ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ತಳಮಳವಾಗಿದೆ. ಸಿದ್ದರಾಮಯ್ಯ ಕೇಸರಿ ಪೇಟ ಹಾಕಲು ಹೋದಾಗ ಅದನ್ನು ಕಿತ್ತು ಬಿಸಾಕಿದ್ದರು. ಅವರಿಗೆ ಟಿಪ್ಪು ಸುಲ್ತಾನ್ ಪೇಟವೇ ಬೇಕು. ಡಿಕೆಶಿಗೂ ಟಿಪ್ಪು ಪೇಟವೇ ಬೇಕು ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕ್ರಿಶ್ಚಿಯನ್ನರ ಎಷ್ಟು ಶಾಲೆಗಳಲ್ಲಿ ಯೂನಿಫಾರ್ಮ್ ಬಿಟ್ಟು ಹಿಜಾಬ್ ಹಾಕಿಕೊಂಡು ಹೋಗಲು ಅವಕಾಶ ಇದೆ? ಡಿ. ಕೆ. ಶಿವಕುಮಾರ್ ಈ ಬಗ್ಗೆ ಹೇಳಲಿ. ಹೀಗಾಗಿ ಕೇಸರಿ ಶಾಲು ಹಂಚಲು ನನಗೆ ಸ್ವಾತಂತ್ರ್ಯ ಇದೆ. ಇದಕ್ಕೆ ಡಿಕೆಶಿಯವರ ಅನುಮತಿ ಬೇಡ ಎಂದರು. ನಾನು ಸ್ವತಂತ್ರ ಭಾರತದಲ್ಲಿ ಇದ್ದೇನೆ. ನನಗಿರೋ ಸ್ವಾತಂತ್ರ್ಯ ಪ್ರಶ್ನೆ ಮಾಡಲು ಯಾರಿಗೂ ಹಕ್ಕಿಲ್ಲ. ಬಂಡೆಯನ್ನು ಲೂಟಿ ಮಾಡಿದ ವ್ಯಕ್ತಿ ಡಿಕೆಶಿ. ಹೀಗಾಗಿ ಡಿಕೆಶಿಗೆ ಧಮ್ ಇದ್ದರೆ ಮುಸಲ್ಮಾನ ಹುಡುಗಿಯರನ್ನು ಮಸೀದಿಗೆ ಕರೆದುಕೊಂಡು ಹೋಗಲಿ ಎಂದು ಸವಾಲು ಹಾಕಿದರು.
ಕರ್ನಾಟಕದಲ್ಲಿ ಎಲ್ಲಾ ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಧರಿಸುವ ಸ್ವಾತಂತ್ರ್ಯ ಇದೆ ಆದರೆ ಹಿಂದೂ ಅಥವಾ ಮುಸ್ಲಿಂ ಯಾರೇ ಇರಲಿ, ಶಾಲೆಯೊಳಗೆ ಸಮವಸ್ತ್ರ ಹಾಕಿಯೇ ಹೋಗಬೇಕು. ಮುಸ್ಲಿಂ ಶಾಸಕಿ ಖನಿಝಾ ಪಾತಿಮಾ ಹಿಜಾಬ್ ಧರಿಸಿ ವಿಧಾನಸೌಧಕ್ಕೆ ಬಂದರೆ ಬಂಧನ ಮಾಡುವುದಿಲ್ಲ ನಿಮಗೆ ಹೇಗೆ ವಿಧಾನಸೌಧಕ್ಕೆ ಹಿಜಾಬ್ ಹಾಕಿಕೊಂಡು ಹೋಗಲು ಅವಕಾಶ ಇದೆಯೋ, ಹಾಗೆಯೇ ನಮಗೂ ಕೇಸರಿ ಶಾಲು ಹಾಕಲು ಸ್ವಾತಂತ್ರ್ಯ ಇದೆ ಎಂದರು.
ಭವಿಷ್ಯದಲ್ಲಿ ಭಗವಾಧ್ವಜವೇ ರಾಷ್ಟ್ರ ಧ್ವಜ ಆಗಬಹುದು: ಕೆ. ಎಸ್. ಈಶ್ವರಪ್ಪ
Recent Comments
ಕಗ್ಗದ ಸಂದೇಶ
on