Tuesday, July 5, 2022
spot_img
Homeಜಿಲ್ಲಾದಾಂಡೇಲಿ : ಕಾಳಿ ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕನನ್ನು ನೀರಿನೊಳಗೆ ಎಳೆದೊಯ್ದ ಮೊಸಳೆ

ದಾಂಡೇಲಿ : ಕಾಳಿ ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕನನ್ನು ನೀರಿನೊಳಗೆ ಎಳೆದೊಯ್ದ ಮೊಸಳೆ

ದಾಂಡೇಲಿ : ದೈನಂದಿನ ಕೆಲಸ ಮುಗಿಸಿ ಸ್ನಾನ ಮಾಡಲು ಕಾಳಿ ನದಿಗೆ ಇಳಿದಿದ್ದ ಯುವಕನನ್ನು ಮೊಸಳೆ ಎಳೆದೊಯ್ದಿರುವ ಘಟನೆ ದಾಂಡೇಲಿ ಬಳಿಯ ಕಾಳಿ ನದಿಯಲ್ಲಿ ನಡೆದಿದೆ. ದಾಂಡೇಲಿಯ ಪಟೇಲ್ ನಗರದ ಹರ್ಷದ್ ಖಾನ್ ರಾಯಚೂರು (22ವ.) ಮೊಸಳೆ ದಾಳಿಗೆ ಬಲಿಯಾದ ಯುವಕ.
ದಿನನಿತ್ಯದ ಕೆಲಸ ಮುಗಿಸಿದ ಯುವಕ ಸ್ನಾನಕ್ಕಾಗಿ ಕಾಳಿ ನದಿ ದಡಕ್ಕೆ ಹೋಗಿದ್ದ. ಈ ವೇಳೆ ನೀರಿಗೆ ಕೈ ಹಾಕುತ್ತಿದ್ದಂತೆ ಮೊಸಳೆ ಆತನನ್ನು ಎಳೆದೊಯ್ದಿದೆ. ಇದನ್ನು ನೋಡುತ್ತಿದ್ದ ಸ್ಥಳೀಯರು ಮೊಸಳೆ ಬಗ್ಗೆ ಆತನಿಗೆ ಕೂಗಿ ಹೇಳಿದ್ದಾರೆ. ಆದರೆ ಅವರ ಮಾತು ಯುವಕನಿಗೆ ಕೇಳಿಸಲಿಲ್ಲ, ನೋಡ ನೋಡುತ್ತಿದ್ದಂತೆ ಯುವಕನನ್ನು ಮೊಸಳೆ ನೀರಿನೊಳಗೆ ಎಳೆದೊಯ್ದಿದೆ. ಸ್ಥಳೀಯರು ಆತನನ್ನು ರಕ್ಷಿಸಲು ಯತ್ನಿಸಿದ್ದಾರೆ, ಆದರೆ ಸಾಧ್ಯವಾಗಿಲ್ಲ ಎಂದು ದಾಂಡೇಲಿ ಡಿವೈಎಸ್ ಪಿ ಗಣೇಶ್ ಹೇಳಿದ್ದಾರೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!