ಪುಣೆ: ಆಸ್ಟ್ರೇಲಿಯಾದ ಟೆನ್ನಿಸ್ ತಾರೆಯರಾದ ಲೂಕ್ ಮತ್ತು ಜಾನ್ ಸೋಲಿಸುವುದರೊಂದಿಗೆ ಭಾರತದ ರೋಹನ್ ಬೋಪಣ್ಣ- ರಾಮ್ ಕುಮಾರ್ ಜೋಡಿ ಟಾಟಾ ಓಪನ್ ಟೆನ್ನಿಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ರೋಹನ್- ರಾಮ್ ಜೋಡಿ ಎರಡನೇ ಎಟಿಪಿ ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದಂತಾಗಿದೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತೀಯ ಜೋಡಿ ಅಗ್ರ ಶ್ರೇಯಾಂಕಿತ ಆಸ್ಟ್ರೇಲಿಯಾ ಜೋಡಿಯನ್ನು ಮಣಿಸಿದ್ದು ವಿಶೇಷ. ರೋಹನ್ ಬೋಪಣ್ಣ ಮತ್ತು ರಾಮ್ ಕುಮಾರ್ ಕಳೆದ ತಿಂಗಳು ನಡೆದ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಮೊದಲ ಬಾರಿ ಜೊತೆಯಾಗಿ, ಪಂದ್ಯಾವಳಿಯಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
Recent Comments
ಕಗ್ಗದ ಸಂದೇಶ
on