Wednesday, July 6, 2022
spot_img
HomeUncategorizedಸರಕಾರಿ ನೌಕರರು ಕಚೇರಿಗೆ ಕಾಲಿಡುವ ಮುನ್ನ ನಗದು ವಿವರ ಕಡ್ಡಾಯ

ಸರಕಾರಿ ನೌಕರರು ಕಚೇರಿಗೆ ಕಾಲಿಡುವ ಮುನ್ನ ನಗದು ವಿವರ ಕಡ್ಡಾಯ

ಬೆಂಗಳೂರು : ಸರಕಾರಿ ಇಲಾಖೆಯಲ್ಲಿ ಸರಕಾರಿ ನೌಕರರು ಮನೆಗೆ ಹೋಗುವಾಗ ಜೇಬು ತುಂಬಿಸಿಕೊಂಡು ಹೋಗುತ್ತಾರೆ ಎಂಬ ಅಪವಾದಗಳು ಹೆಚ್ಚು. ಇಂತಹ ಸಾರ್ವಜನಿಕ ಆರೋಪಗಳ ಹಿನ್ನಲೆಯಲ್ಲಿ ಸರಕಾರ ನೌಕರರ ಜೇಬಿನ ಮೇಲೆ ನಿಗಾ ಇಡಲು ಮುಂದಾಗಿದೆ.
ಸರಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿ ನೌಕರನ ವೈಯಕ್ತಿಕ ನಗದನ್ನು ಗಮನಿಸಲು ಸರಕಾರ ಸುತ್ತೋಲೆ ಹೊರಡಿಸಿದೆ.
ನೌಕರರ ಅಧಿಕೃತ ಸಹಿ ಹಾಜರಾತಿ/ ಎಎಂಎಸ್‌ ನಲ್ಲಿ ಕೆಲಸದ ದಿನದಂದು ಕರ್ತವ್ಯಕ್ಕೆ ವರದಿ ಮಾಡಿದ ತಕ್ಷಣ ಆತನು ಕಚೇರಿಗೆ ತಂದ ನಗದು ಮೊತ್ತವನ್ನು ರಿಜಿಸ್ಟರ್‌ನಲ್ಲಿ ತನ್ನ ಸಹಿಯೊಂದಿಗೆ ಘೋಷಿಸತಕ್ಕದ್ದು.
ಯಾವುದೇ ನೌಕರರು ನಗದು ಘೋಷಣೆ ಮಾಡಿದಕ್ಕಿಂತ ಹೆಚ್ಚುವರಿ ಹಣ ಹೊಂದಿರುವುದು ಕಂಡು ಬಂದರೆ ಆ ಹಣವನ್ನು ಅಕ್ರಮ ಸಂಪಾದನೆ ಎಂದು ಅರ್ಥೈಸಲಾಗುತ್ತದೆ. ಆ ಹಣವನ್ನು ಸಕ್ರಮ ಹಣ ಎಂದು ಸಾಬೀತುಪಡಿಸುವುದು ನೌಕರರ ಹೊಣೆಯಾಗಿದೆ.
ನಗದು ಘೋಷಣೆಯನ್ನು ಕಚೇರಿ ವೇಳೆಯ ಎಲ್ಲ ಸಮಯದಲ್ಲಿ ಯಾವುದೇ ಉನ್ನತ ವಿಭಾಗದ ಮುಖ್ಯಸ್ಥರ ತಪಾಸಣೆಗೆ ತೆರೆದಿಡತಕ್ಕದ್ದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!