ಬೆಂಗಳೂರು : ಪ್ರಥಮ ಪಿಯುಸಿ ವಾರ್ಷಿಕ ಮತ್ತು ಪೂರಕ ಪರೀಕ್ಷೆಗಳನ್ನು ಜಿಲ್ಲಾಮಟ್ಟದಲ್ಲಿ ನಡೆಸುವಂತೆ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸೂಚನೆ ನೀಡಿದ್ದಾರೆ.
ವಾರ್ಷಿಕ ಪರೀಕ್ಷೆಗಳನ್ನು ಮಾರ್ಚ್ 28ರಿಂದ ಏಪ್ರಿಲ್ 13ರವರೆಗೆ ಮಧ್ಯಾಹ್ನ 2.30ರಿಂದ 5.45ರ ಅವಧಿಯಲ್ಲಿ ನಡೆಸಬೇಕು. ಈ ವೇಳಾಪಟ್ಟಿಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಅವರು ಸೂಚಿಸಿದ್ದಾರೆ.
ಮೌಲ್ಯಮಾಪನವನ್ನು ಏಪ್ರಿಲ್ 20ರೊಳಗೆ ಪೂರ್ಣಗೊಳಿಸಿ, ಆಯಾ ಕಾಲೇಜುಗಳಲ್ಲಿ 30ರಂದು ಫಲಿತಾಂಶ ಪ್ರಕಟಿಸಬೇಕು. ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆಗೆ ಶುಲ್ಕ ಕಟ್ಟಲು ಮೇ 16 ಕೊನೆಯ ದಿನ. ಮೇ 25ರಿಂದ ಜೂನ್ವರೆಗೆಪೂರಕ ಪರೀಕ್ಷೆಗಳನ್ನು ನಡೆಸಬೇಕು. ಜೂನ್ 15ರಂದು ಫಲಿತಾಂಶ ಪ್ರಕಟಿಸಬೇಕು ಎಂದೂ ತಿಳಿಸಿದ್ದಾರೆ.