ಕಾರ್ಕಳ : ರಸ್ತೆ ಬದಿ ಕಸ ಎಸೆದಾತನಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಂಡ ವಿಧಿಸಿ, ಅವರಿಂದಲೇ ಕಸ ತೆಗೆಸಿರುವ ಘಟನೆ ಫೆ. 7ರಂದು ನೀರೆಯಲ್ಲಿ ನಡೆದಿದೆ. ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಡ್ಡಿನಂಗಡಿ ಬಳಿಯ ಉಡುಪಿ -ಕಾರ್ಕಳ ಹೈವೆಯಲ್ಲಿ ಜಾರ್ಕಳ ಮೂಲದ ವ್ಯಕ್ತಿಯೋರ್ವರು ಬೈಕಿನಲ್ಲಿ ರಟ್ಟು, ಪ್ಲಾಸ್ಟಿಕ್ ಇತರೆ ತ್ಯಾಜ್ಯವನ್ನು ತಂದು ರಸ್ತೆ ಬದಿ ಎಸೆದಿರುತ್ತಾರೆ. ಇದೇ ರಸ್ತೆಯಾಗಿ ಕಾರಿನಲ್ಲಿ ಸಾಗುತ್ತಿದ್ದ ನೀರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಇದನ್ನು ಗಮನಿಸಿದ್ದು, ತಕ್ಷಣವೇ ಆ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಹೋಗಿರುತ್ತಾರೆ. ಆತನನ್ನು ವಾಪಸ್ ಘಟನಾ ಸ್ಥಳ ಬರುವಂತೆ ಮಾಡಿ, ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಗಣೇಶ್ ಅವರನ್ನೂ ಸ್ಥಳಕ್ಕೆ ಬರುವಂತೆ ತಿಳಿಸಿ ಸ್ಥಳದಲ್ಲೇ ಕಸ ಎಸೆದಾತನಿಗೆ ರೂ. 500 ದಂಡ ವಿಧಿಸಿರುತ್ತಾರೆ. ಬಳಿಕ ಅದೇ ವ್ಯಕ್ತಿಯಿಂದ ಕಸವನ್ನು ತೆಗೆಸಿರುತ್ತಾರೆ. ಪಿಡಿಒ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
Recent Comments
ಕಗ್ಗದ ಸಂದೇಶ
on