ಕಾರ್ಕಳ : ಮಾವಿನಕಟ್ಟೆ – ನಂದಳಿಕೆ ಶ್ರೀ ಮಹಾಮ್ಮಾಯಿ ದೇವಿ ದೇವಸ್ಥಾನದ ವಾರ್ಷಿಕ ಮಾರಿಪೂಜಾ ಮಹೋತ್ಸವ ಫೆ. 8ರಂದು ನಡೆಯಲಿದೆ. ಬೆಳಗ್ಗೆ 9 ರಿಂದ ಸ್ವಸ್ತಿ ಪುಣ್ಯಾಹ ವಚನ, ತೋರಣ ಮುಹೂರ್ತ, ನವಕ ಕಲಶ ಪ್ರಧಾನ ಹೋಮ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಸೇವಾರ್ಪಣೆಗಳು, ಸಂಜೆ 4 ರಿಂದ ಭಜನೆ, 6ಗಂಟೆಗೆ ಸೇವೆಗಳು, 6.30ರಿಂದ ದೇವಿಯ ಮಹಾ ಪೂಜೆ, ರಂಗಪೂಜೆ, ರಾತ್ರಿ ಗಂಟೆ 7ರಿಂದ ಶ್ರೀ ದೇವಿ ದರ್ಶನ, 7.30ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ 8.30 ಕ್ಕೆ ಬಲಿ ಅರ್ಪಣೆ ಜರುಗಲಿರುವುದು.
ಭಜನಾ ವೈವಿಧ್ಯ
ಸಂಜೆ 4.30 ರಿಂದ ಮಾವಿನ ಕಟ್ಟೆ ಮಹಿಳಾ ತಂಡದಿಂದ ಭಜನಾ ಸೇವೆ, ಸಂಜೆ 6.30 ರಿಂದ ಶ್ರೀ ಮಹಾಮ್ಮಾಯಿ ಭಜನಾ ಮಂಡಳಿ, ಮಾವಿನಕಟ್ಟೆ ಇವರಿಂದ ಭಜನಾ ಸೇವೆ ನಡೆಯಲಿರುವುದು ಎಂದು ದೇವಸ್ಥಾನದ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.