ಕಾರ್ಕಳ : ಭಾರತ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಮತದಾರರ ಪಟ್ಟಿಯ ಪರಿಷ್ಕರಣೆ, ಉತ್ತಮ ಬಿಎಲ್ಒ (ಮತಗಟ್ಟೆ ಮಟ್ಟದ ಅಧಿಕಾರಿ) ಮೇಲ್ವಿಚಾರಣೆಗಾಗಿ ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಗ್ರಾಮಕರಣಿಕ ರಘುಪತಿ ಆರ್. ಅವರಿಗೆ ಬೆಸ್ಟ್ ಪರ್ಫಾರ್ಮನ್ಸ್ ಇನ್ ಎಲೆಕ್ಟ್ರಾಲ್ ಪ್ರಾಕ್ಟೀಸಸ್ ಅವಾರ್ಡ್ ಆಫ್ ಎಕ್ಸಲೆನ್ಸ್ ಜಿಲ್ಲಾ ಅವಾರ್ಡ್, ಬೆಳ್ಮಣ್ ನ ಪುಷ್ಪಾ ಉತ್ತಮ ಬಿಎಲ್ಒ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಫೆ. 7ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಕೂರ್ಮ ರಾವ್ ಎಂ. ಪ್ರಶಸ್ತಿ ಹಸ್ತಾಂತರಿಸಿದರು.
ಮೂಲತಃ ಬಳ್ಳಾರಿ ಜಿಲ್ಲೆಯ ವಿಜಯನಗರದ ರಘುಪತಿ ಅವರು ಕಳೆದ 9 ವರ್ಷಗಳಿಂದ ಕಾರ್ಕಳ ತಾಲೂಕಿನಲ್ಲಿ ಗ್ರಾಮಕರಣಿಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.
ಬೆಳ್ಮಣ್ ವ್ಯಾಪ್ತಿಯಲ್ಲಿ 12 ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಪುಷ್ಪಾ ಅವರು ಕಳೆದ 6 ವರ್ಷಗಳಿಂದ ಮತಗಟ್ಟೆ ಮಟ್ಟದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
