Tuesday, May 17, 2022
spot_img
Homeಸ್ಥಳೀಯ ಸುದ್ದಿಫೆ. 12 - 19 : ಕಡತ ವಿಲೇವಾರಿ ಅಭಿಯಾನ - ಸುನಿಲ್‌ ಕುಮಾರ್‌

ಫೆ. 12 – 19 : ಕಡತ ವಿಲೇವಾರಿ ಅಭಿಯಾನ – ಸುನಿಲ್‌ ಕುಮಾರ್‌

ಕಾರ್ಕಳ : ಸರಕಾರಿ ಇಲಾಖೆಗಳ ಕಡತ ವಿಲೇವಾರಿ ಅಭಿಯಾನವು ಫೆ. 12 ರಿಂದ 19ರ ತನಕ ನಡೆಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್ ಹೇಳಿದರು.

ರವಿವಾರ ಕಾರ್ಕಳದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಸರಕಾರಿ ಕಚೇರಿ ಕಾರ್ಯಗಳಿಗೆ ವೇಗ ನೀಡುವ ಹಾಗೂ ಜನಸಾಮಾನ್ಯರ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಕಡತ ವಿಲೇವಾರಿ ಅಭಿಯಾನ ಮಾಡಲಾಗುತ್ತಿದೆ. ಸರಕಾರಿ ಕೆಲಸಗಳಿಗೆ ಮಧ್ಯವರ್ತಿಗಳ ಹಾಗೂ ಪ್ರಭಾವಿತರನ್ನು ಅವಲಂಬಿಸುವ ಅಗತ್ಯವಿಲ್ಲವೆಂದರು.

ಹಿಂಬರಹ ನೀಡಬೇಕು
ಅನಗತ್ಯವಾಗಿ ಕಡತಗಳು ವಿಳಂಬವಾಗಬಾರದು. ಸಪ್ತಾಹದ ಅವಧಿಯಲ್ಲಿ ಸರಕಾರಿ ಅಧಿಕಾರಿಗಳ ಮೇಜಿನ ಮೇಲೆ ಯಾವುದೇ ಕಡತಗಳು ಬಾಕಿಯಾಗಬಾರದು. ಎಲ್ಲ ಅರ್ಜಿಯನ್ನು ಪರಿಶೀಲಿಸಿ ಹಿಂಬರಹ ನೀಡಬೇಕು. ಹೀಗಾಗಿ ಯಾವುದೇ ಅಧಿಕಾರಿ, ಸಿಬ್ಬಂದಿ ಗೈರಾಗಬಾರದೆಂದರು.

ಕರೋನಾ ಕಾರಣದಿಂದ ಮುಂದೂಡಲಾದ ಕಾರ್ಕಳ ಉತ್ಸವ ಕಲಾವಿದರ ಸಮಯ ಗೊತ್ತುಪಡಿಸಿ ಘೋಷಿಸಲಾಗುವುದು ಎಂದು ಸುನಿಲ್‌ ಕುಮಾರ್‌ ಇದೇ ಸಂದರ್ಭದಲ್ಲಿ ತಿಳಿಸಿದರು.

ಕಂದಾಯ ಮೇಳ
ಫೆ. 19ರಂದು ಕಂದಾಯ ಮೇಳ ಜರಗಲಿದ್ದು, ಸಚಿವ ಆರ್ . ಅಶೋಕ್‌ ಉದ್ಘಾಟಿಸುವರು ಎಂದು ಸುನಿಲ್‌ ಕುಮಾರ್‌ ತಿಳಿಸಿದರು.

ತಹಶೀಲ್ದಾರ್ ಕೆ. ಪುರಂದರ, ತಾ.ಪಂ.‌ ಆಡಳಿತಾಧಿಕಾರಿ ಶಶಿಧರ್‌, ಕಾರ್ಯನಿರ್ವಹಣಾಧಿಕಾರಿ ಗುರುದತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!