ಕಾರ್ಕಳ : ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ 5.96 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು ಫೆ. 7 ರಂದು ಸಚಿವ ವಿ. ಸುನಿಲ್ ಕುಮಾರ್ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಲಕ್ಷ ಪರದೆ ಬಳಿ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಉದ್ಘಾಟನೆ, ಸಾಣೂರು ಇಂದಿರಾನಗರ ರಸ್ತೆ ಅಭಿವೃದ್ಧಿಗೆ (50 ಲಕ್ಷ ರೂ. ವೆಚ್ಚ) ಗುದ್ದಲಿ ಪೂಜೆ, ಮಠದ ಕೆರೆ ಅಭಿವೃದ್ಧಿಗೆ (1 ಕೋಟಿ ರೂ. ವೆಚ್ಚ) ಶಿಲಾನ್ಯಾಸ, ಸಾಣೂರು ಬಾವದ ಬೆಟ್ಟು ಪರಪ್ಪಾಡಿ (1 ಕೋಟಿ ರೂ.) ಗುದ್ದಲಿ ಪೂಜೆ, ಸರಕಾರಿ ಪದವಿ ಪೂರ್ವ ಕಾಲೇಜು ಕೊಠಡಿ (96 ಲಕ್ಷ ರೂ.)ಗೆ ಗುದ್ದಲಿ ಪೂಜೆ, ಮುರತ್ತಂಗಡಿ ನಂದ್ರೋಟ್ಟು ಕರೆ ಚಾವಂಡಿ ರಸ್ತೆ (50 ಲಕ್ಷ ರೂ. )ಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಗುದ್ದಲಿ ಪೂಜೆ ನೆರವೇರಿಸಲಿರುವರು.
ಸಾಣೂರು ಗ್ರಾ.ಪಂ. ವಿವಿಧ ಕಾಮಗಾರಿಗಳಿಗೆ 5.96 ಕೋಟಿ ರೂ. ಅನುದಾನ : ಫೆ. 7ರಂದು ಸಚಿವರಿಂದ ಶಿಲಾನ್ಯಾಸ- ಉದ್ಘಾಟನೆ
Recent Comments
ಕಗ್ಗದ ಸಂದೇಶ
on