ಕಾರ್ಕಳ : ಸಾಧಿಸುವ ಛಲ, ಏಕಾಗ್ರತೆಯ ಬಲ, ನಿರಂತರ ಪರಿಶ್ರಮ, ದೃಢಸಂಕಲ್ಪ, ಆತ್ಮವಿಶ್ವಾಸವಿದ್ದಲ್ಲಿ ಪರೀಕ್ಷೆಯನ್ನು ಎದುರಿಸುವುದು ಸುಲಭ ಎಂದು ಜೇಸಿಐ ರಾಷ್ಟ್ರೀಯ ತರಬೇತಿದಾರ ಶಿವರಾಮ ಕೆ.ಕೆ. ಹೇಳಿದರು.
ಅವರು ಜೇಸಿಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಸ್.ಎಸ್ಎ.ಲ್. ಸಿ. ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು. ಜೇಸಿಐ ನೂತನ ಅಧ್ಯಕ್ಷ ಡಾ. ಮುರಳಿಧರ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂತೋಷ್ ಕುಮಾರ್ ರೆಂಜಾಳ, ಶಾಲಾ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಆಡಳಿತಾಧಿಕಾರಿ ಪೂನಂ ಕಾಮತ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಸುರೇಖಾ ರಾಜ್ ಸ್ವಾಗತಿಸಿ, ಸಹಶಿಕ್ಷಕಿ ಆಶಿಕಾ ವಂದಿಸಿದರು.
ಪರೀಕ್ಷೆಯ ಯಶಸ್ಸಿಗೆ ಆತ್ಮವಿಶ್ವಾಸವೇ ಕೀಲಿಕೈ
Recent Comments
ಕಗ್ಗದ ಸಂದೇಶ
on