ಹೆಬ್ರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಸಮಾಲೋಚನೆ ಸಭೆ
ಅಧ್ಯಕ್ಷರ ಆಯ್ಕೆ ಸರ್ವಸಮ್ಮತವಾಗಿರಲಿ : ಸದಸ್ಯರ ಆಗ್ರಹ

ಹೆಬ್ರಿ : ಹೆಬ್ರಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಯಾರಾಗಬಹುದೆಂದು ಸೂಚನೆ ಮಾಡಿ, ಬಳಿಕ ನಾವು ಸಮಾಲೋಚನೆ ಮಾಡಿ ಘೋಷಿಸುತ್ತೇವೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಹೆಬ್ರಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಕೇಳಿದರು.
ಈ ವೇಳೆ ಮಾತನಾಡಿದ ಕೆಲ ಸದಸ್ಯರು ಹೆಬ್ರಿ ತಾಲೂಕು ವ್ಯಾಪ್ತಿಯ ಕನ್ನಡ ಸಾಹಿತ್ಯ ಪರಿಷತ್‌ಗೆ ನೀವೆ ಆಯ್ಕೆ ಮಾಡುವುದಾದರೇ ಸಮಾಲೋಚನೆ ಸಭೆ ಯಾಕೆ ಮಾಡುತ್ತೀರಿ ಎಂದು ಪ್ರಶ್ನಿಸಿದ ಘಟನೆ ನಡೆಯಿತು. ಈ ವೇಳೆ ಕೆಲ ಕಾಲ ಚರ್ಚೆ ನಡೆದು ಸಭೆಯ ಗೊಂದಲದ ಗೂಡಾಯಿತು. ಬಳಿಕ ಸಭೆ ಪೂರ್ಣವಾಗದೇ ಸ್ಥಗಿತಗೊಂಡಿತು.

ಹೆಸರು ಸೂಚನೆ
ಕರ್ನಾಟಕ ರಕ್ಷಣಾ ವೇದಿಕೆಯ ಹೆಬ್ರಿ ಘಟಕದ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ ಅವರು ನಿವೃತ್ತ ಶಿಕ್ಷಕ ಹೆಬ್ಬೇರಿ ಪತ್ರಿಕೆಯ ಪ್ರಕಾಶಕರಾಗಿದ್ದ ಶ್ರೀನಿಧಿ ಮುದ್ರಣ ಸಂಸ್ಥೆಯ ಮುಖ್ಯಸ್ಥ ಎಚ್. ರಾಜೀವ ಶೆಟ್ಟಿ ಅವರನ್ನು ಸೂಚಿಸಿದರು,
ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ ಮತ್ತು ಎಚ್. ರಾಜೀವ ಶೆಟ್ಟಿ ಅವರು ಉದ್ಯಮಿ ಯೋಗೀಶ್ ಭಟ್ ಹೆಸರನ್ನು ಸೂಚಿಸಿದರು. ಸುರೇಶ ಭಂಡಾರಿ ಮತ್ತು ಸುದೇಶ ಪ್ರಭು ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರವೀಣ್ ಕುಮಾರ್ ಸುದೇಶ ಪ್ರಭು, ಹೆಬ್ರಿ ಎಚ್‌. ಜನಾರ್ದನ್‌, ಮುದ್ರಾಡಿ ಕೆ.ಎಸ್. ಕಲ್ಕೂರ ಸಹಿತ ಹಲವರು ಪೂರ್ವಾಧ್ಯಕ್ಷ ಅಧ್ಯಕ್ಷ ಪಿ.ವಿ. ಆನಂದ ಸಾಲಿಗ್ರಾಮ ಅವರ ಹೆಸರನ್ನು ಸೂಚಿಸಿದರು. ಪಿ.ವಿ. ಆನಂದ ಮತ್ತು ಯೋಗೀಶ್ ಭಟ್ ವೈಯಕ್ತಿಕ ಕಾರಣದಿಂದಾಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಉದ್ಯಮಿಗಳಾದ ಗುರುದಾಸ ಶೆಣೈ, ಹೆಚ್‌. ಭಾಸ್ಕರ್ ಜೋಯಿಸ್, ಬಿ.ಸಿ. ರಾವ್‌ ಶಿವಪುರ ಹಲವು ಸಲಹೆ ಸೂಚನೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಮತ್ತು ನರೇಂದ್ರ ಕುಮಾರ್ ಉಪಸ್ಥಿತರಿದ್ದರು.









































































































































































error: Content is protected !!
Scroll to Top