ಹೆಬ್ರಿಯಲ್ಲಿ ಆರ್.ಟಿ.ಒ. ಕ್ಯಾಂಪ್ ಆರಂಭ – ಬಹುಕಾಲದ ಕನಸು ನನಸು : ತಿಂಗಳ ಮೊದಲ ಶನಿವಾರ ಸೇವೆ ಲಭ್ಯ

ಹೆಬ್ರಿ : ಹೆಬ್ರಿಯಲ್ಲಿ ಸಾರಿಗೆ ಇಲಾಖೆಯ ವತಿಯಿಂದ ತಿಂಗಳ ಮೊದಲ ಶನಿವಾರ ಇನ್ನು ಮುಂದೆ ಕ್ಯಾಂಪ್ ನಡೆಯಲಿದೆ. ಚೈತನ್ಯ ಯುವ ವೃಂದದವರು ಸಾರಿಗೆ ಇಲಾಖೆಗೆ ಸಭಾಂಗಣ ವ್ಯವಸ್ಥೆ ಮಾಡಿಕೊಟ್ಟಿದ್ದು, ಯುವ ವೃಂದಕ್ಕೆ ಸಾರಿಗೆ ಇಲಾಖೆ ಆರ್.ಟಿ.ಒ. ಇನ್ಸ್‌ ಫೆಕ್ಟರ್ ವಿಶ್ವನಾಥ ನಾಯಕ್ ಅಭಿನಂದನೆ ಸಲ್ಲಿಸಿದರು.

ಕಳೆದ 15 ವರ್ಷಗಳಿಂದ ಹೆಬ್ರಿಯಲ್ಲಿ ಸಾರಿಗೆ ಇಲಾಖೆಯ ಕ್ಯಾಂಪ್ ಆರಂಭಿಸುವಂತೆ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಒತ್ತಾಯಿಸಿದ್ದರು. ಗುಡ್ ಲಕ್ ಮೋಟಾರು ತರಬೇತಿ ಶಾಲೆಯ ರಂಜಿತ್ ಹೆಗ್ಡೆ ಅವರೂ ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದರು. ಇದೀಗ ಪ್ರತಿ ಶನಿವಾರ ಕ್ಯಾಂಪ್‌ ಇರುವುದರಿಂದ ಸಾರಿಗೆ ಇಲಾಖೆಗೆ ಸಂಬಂಧಿಸಿದ ಎಫ್ ಸಿ ಮತ್ತು ಆರ್ ಆರ್ ಸಿ ಕೆಲಸಗಳನ್ನು ಮಾಡಿಸಬಹುದಾಗಿದೆ.

ಶನಿವಾರ ಹೆಬ್ರಿ ಕ್ಯಾಂಪ್‌ಗೆ ಚಾಲನೆ ನೀಡಲಾಗಿದ್ದು, ಈ ಸಂದರ್ಭ ಹೆಬ್ರಿ ಗ್ರಾಮ‌ ಪಂಚಾಯತ್‌ ಅಧ್ಯಕ್ಷೆ ಮಾಲತಿ, ವಕೀಲ ಭರತ್ ಶೆಟ್ಟಿ, ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಲಕ್ಷ್ಮೀ ನಾರಾಯಣ ನಾಯಕ್, ಬಿಜೆಪಿ ನಾಯಕ ಗುರುದಾಸ್‌ ಶೆಣೈ, ಚೈತನ್ಯ ಯುವ ವೃಂದದ ನರೇಂದ್ರ ನಾಯಕ್, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.





























































































































































































































error: Content is protected !!
Scroll to Top