Tuesday, May 17, 2022
spot_img
HomeUncategorizedಶ್ರೀನಗರದಲ್ಲಿ ಎನ್ಕೌಂಟರ್: ಇಬ್ಬರು ಉಗ್ರರ ಹೊಡೆದುರುಳಿಸಿದ ಸೇನಾಪಡೆ

ಶ್ರೀನಗರದಲ್ಲಿ ಎನ್ಕೌಂಟರ್: ಇಬ್ಬರು ಉಗ್ರರ ಹೊಡೆದುರುಳಿಸಿದ ಸೇನಾಪಡೆ

ಶ್ರೀನಗರ: ಶ್ರೀನಗರದ ಜಕುರಾ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಭಾರತೀಯ ಸೇನಾಪಡೆ ಎನ್‌ಕೌಂಟರ್ ನಡೆಸಿದ್ದು, ಲಷ್ಕರ್ ಇ ತೋಯ್ಬಾದ ಮತ್ತೊಂದು ಅಂಗವಾದ ಟಿಆರ್​ಎಫ್​​ನ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹತ್ಯೆಗೀಡಾದ ಭಯೋತ್ಪಾದಕರಲ್ಲಿ ಒಬ್ಬನನ್ನು ಇಖ್ಲಾಕ್ ಹಜಂ ಎಂದು ಗುರುತಿಸಲಾಗಿದ್ದು, ಇತ್ತೀಚೆಗೆ ಅನಂತ್‌ನಾಗ್‌ನ ಹಸನ್‌ಪೋರಾದಲ್ಲಿ ನಡೆದ ಹೆಡ್​ಕಾನ್ಸ್​ಟೇಬಲ್​​​ ಅಲಿ ಮೊಹಮ್ಮದ್ ಹತ್ಯೆಯಲ್ಲಿ ಇಖ್ಲಾಕ್ ಭಾಗಿಯಾಗಿದ್ದನು ಎಂದು ತಿಳಿಸಿದ್ದಾರೆ. 

ಕಾರ್ಯಾಚರಣೆಯ ಸ್ಥಳದಿಂದ ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. 

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!