ಕಾರ್ಕಳ : ಮಕ್ಕಳಲ್ಲಿ ನಾವು ಶಿಕ್ಷಣದ ಜೊತೆಗೆ ಧರ್ಮ ಸಂಸ್ಕೃತಿಯ ಅರಿವು ಮೂಡಿಸಬೇಕು. ನಮ್ಮ ಮನೆಯ ಶುಭ ಸಂಭ್ರಮಗಳಲ್ಲಿ ಡಿಜೆ ಸಂಸ್ಕೃತಿ ಬದಲಾಗಿ ಭಜನೆ ಸಂಸ್ಕೃತಿಯಿರಬೇಕು ಎಂದು ಕೇರಳ ವರ್ಕಳ ಶಿವಗಿರಿ ಮಠದ ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಮುದ್ರಾಡಿ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ಅಮ್ಮನವರ ನೂತನ ಶಿಲಾಮಯ ದೇವಸ್ಥಾನದ ಪುನರ್ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಪನ್ನ ಕಾರ್ಯಕ್ರಮದ ಪ್ರಯುಕ್ತ ಶುಕ್ರವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಕಾರಣೀಕ ಕ್ಷೇತ್ರ
ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ಅಮ್ಮನವರ ಕ್ಷೇತ್ರವು ಪುಣ್ಯ ಮತ್ತು ಕಾರಣೀಕ ಕ್ಷೇತ್ರವಾದ್ದರಿಂದಲೇ ನೂತನ ಶಿಲಾಮಯ ದೇವಸ್ಥಾನದ ಪುನರ್ ನಿರ್ಮಾಣ ಸಾಧ್ಯವಾಗಿದೆ. ಮುದ್ರಾಡಿ ಕ್ಷೇತ್ರ ನಾಡಿನ ಭಕ್ತಿ ವೈಭವದ ಪುಣ್ಯ ನೆಲ, ಧರ್ಮದ ಮೂಲಕ ಕಲೆ ಸಂಸ್ಕೃತಿಯನ್ನು ಉಳಿಸುವ ಮಹತ್ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ದೇವಿಯ ಅನುಗ್ರಹದಿಂದಾಗಿ ನಾನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಎಲ್ಲರ ಸಹಕಾರದೊಂದಿಗೆ ಬ್ರಹ್ಮಕಲಶೋತ್ಸವ ಸಂಭ್ರಮದಿಂದ ಜರಗಿದೆ. ಧರ್ಮದರ್ಶಿ ಮೋಹನ ಸ್ವಾಮೀಜಿಯವರ ಋಣವನ್ನು ಮಕ್ಕಳು ತೀರಿಸಿ ಕಾರಣೀಕ ಕ್ಷೇತ್ರವನ್ನು ನಾಡಿಗೆ ಪರಿಚಯಿಸುವಂತಾಗಿದೆ ಎಂದರು.
ಸುಕುಮಾರ್ ಮೋಹನ್ ಗೆ ಪಟ್ಟಾಭಿಷೇಕ
ಧರ್ಮದರ್ಶಿ ಮೋಹನ ಸ್ವಾಮೀಜಿಯವರು ಇಹಲೋಕ ತ್ಯಜಿಸಿದ ಕಾರಣ ಸುಕುಮಾರ್ ಮೋಹನ್ ಅವರಿಗೆ ಬ್ರಹ್ಮಕಲಶದ ಬಳಿಕ ನಡೆಯುವ ದೃಢ ಕಲಶದ ದಿನ ಪಟ್ಟಾಭಿಷೇಕ ನಡೆಯಲಿದೆ ಎಂದು ಬಜಗೋಳಿ ರವೀಂದ್ರ ಶೆಟ್ಟಿ ತಿಳಿಸಿದರು.
ಸನ್ಮಾನ
ಬ್ರಹ್ಮಕಶೋತ್ಸವದ ಯಶಸ್ವಿಗೆ ದುಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಜಗೋಳಿ ರವೀಂದ್ರ ಶೆಟ್ಟಿ ದಂಪತಿ, ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಹೆಗ್ಡೆ, ನವೀನ್ ಕೋಟ್ಯಾನ್, ರಮೇಶ್ ಕುಮಾರ್ ಶಿವಪುರ, ಹರಿದಾಸ ಹೆಬ್ರಿ, ಟಿ.ಜಿ. ಆಚಾರ್ಯ, ಹೆಬ್ರಿ ಶಂಕರ ಶೇರಿಗಾರ್, ಉಜೂರು ಇಂದಿರಾ ಹೆಗ್ಡೆ,ಕರುಣಾಕರ ನೆಲ್ಲಿಕಟ್ಟೆ, ರವಿರಾಜ ಜೈನ್, ಪತ್ರಕರ್ತೆ ಸುಮಲತಾ ಬಾಲಚಂದ್ರ ಹೆಬ್ಬಾರ್, ಸಿಎ ಜೀವನ್ ಶೆಟ್ಟಿ ಹೇರೂರು, ಉಮೇಶ್ ಕುಕ್ಕುಂದೂರು, ಸಂದೇಶ ಕೋಟ್ಯಾನ್, ನರೇಶ್, ದಿವ್ಯಾ, ಪ್ರಕಾಶ ಭಂಡಾರಿ, ಸುಮಾಲತಾ, ಶ್ವೇತಾ, ಸಂದೇಶ ಭಂಡಾರಿ ಸಹಿತ ಸ್ವಯಂಸೇವಕರು ಮತ್ತು ಹಲವಾರು ಮಂದಿ ದಾನಿಗಳನ್ನು ಸನ್ಮಾನಿಸಲಾಯಿತು.
ಪೂನಾ ಬಿಲ್ಲವ ಸಂಘದ ಅಧ್ಯಕ್ಷ ಕಡ್ತಲ ವಿಶ್ವನಾಥ ಪೂಜಾರಿ, ವಕೀಲ ಕಾರ್ಕಳ ರಮಣಾಚಾರ್ಯ, ವಾಸ್ತುತಜ್ಞ ಪ್ರಮಲ್ ಕುಮಾರ್ ಕಾರ್ಕಳ, ಹೆಬ್ರಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ ಪೂಜಾರಿ ಶಿವಪುರ, ಸೂರತ್ ಉದ್ಯಮಿ ಮುದ್ರಾಡಿ ಮನೋಜ್ ಸಿ. ಪೂಜಾರಿ, ರಂಗ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್, ಉದ್ಯಮಿ ಮಂಜುನಾಥ್ ಕಾಡುಹೊಳೆ, ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ಸೀತಾನದಿ ವಿಠ್ಠಲ ಶೆಟ್ಟಿ, ಕಾರ್ಕಳ ತಾಲ್ಲೂಕು ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಸಮಿತಿಯ ಕಾರ್ಯದರ್ಶಿ ಗಣಪತಿ ಎಂ., ಸಹ ಕಾರ್ಯದರ್ಶಿ ನವೀನ್ಕೋಟ್ಯಾನ್, ಕ್ಷೇತ್ರದ ಮಾತೆ ಕಮಲಾ ಮೋಹನ್, ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಉಮೇಶ್ಕಲ್ಮಾಡಿ, ವಿವಿಧ ಸಮಿತಿಗಳ ಪ್ರಮುಖರು, ಗಣ್ಯರು, ಜನಪ್ರತಿನಿಧಿಗಳು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ಸುಕುಮಾರ್ ಮೋಹನ್ ಸ್ವಾಗತಿಸಿ ಸತೀಶ್ ಹೊಸ್ಮಾರು ನಿರೂಪಿಸಿ, ವಂದಿಸಿದರು.