ಕಾರ್ಕಳ : ದುರ್ಗಾ ಗ್ರಾಮದಲ್ಲಿ 11.94 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಫೆ. 6ರ ರವಿವಾರ ಸಚಿವ ವಿ. ಸುನಿಲ್ ಕುಮಾರ್ ಗುದ್ದಲಿ ಪೂಜೆ ನೆರವೇರಿಸುವರು. ಬೆಳಿಗ್ಗೆ 9 ಗಂಟೆಗೆ ದುರ್ಗಾ ಗ್ರಾಮ ದಯಾಲ್ಬೆಟ್ಟು ಬಳಿ ರೂ. 55 ಲಕ್ಷದ ಕಿಂಡಿ ಅಣೆಕಟ್ಟು, ಹೈಪಾಜೆ ರಸ್ತೆ (25 ಲಕ್ಷ ರೂ.) ಅಭಿವೃದ್ದಿಗೆ ಗುದ್ದಲಿ ಪೂಜೆ ನಡೆಯಲಿದೆ. ತೆಳ್ಳಾರು ಉದ್ದಪಲ್ಕೆಯಿಂದ ಮಾಳಂತಗುತ್ತು ರಸ್ತೆ (8.91 ಕೋಟಿ ರೂ.) ಪೆಲತಾಜೆ ರಸ್ತೆ ಉದ್ಘಾಟನೆ. ನಾರ್ಕಟ್ ಮುಗೇರಳ ಕಡಂಬಳ ರಸ್ತೆ (85 ಲಕ್ಷ ರೂ.) ಉದ್ಘಾಟನೆ, ಮಾಂಜ ಕೊರ್ನಾಲು ರಸ್ತೆ ಅಭಿವೃದ್ಧಿ (1 ಕೋಟಿ ರೂ.)ಗೆ ಗುದ್ದಲಿ ಪೂಜೆ, ರಿವರ್ ಸೈಡ್ ದರ್ಖಾಸು ಜನವಸತಿ ಪ್ರದೇಶದ ಮನೆಗಳಿಗೆ ಕುಡಿಯುವ ನೀರಿಗಾಗಿ 25,000 ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ (38 ಲಕ್ಷ ರೂ. ) ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.
Recent Comments
ಕಗ್ಗದ ಸಂದೇಶ
on