ಕಾರ್ಕಳ : ಪೈಂಟ್ ಮಾಡುವ ಉದ್ದೇಶದಿಂದ ಮನೆಯ ಹಾಲ್ ನಲ್ಲಿ ಅಲ್ಯುಮೀನಿಯಂ ಏಣಿಯಿಟ್ಟು ಹತ್ತುವಾಗ ಆಕಸ್ಮಿಕವಾಗಿ ಜಾರಿ ನೆಲಕ್ಕೆ ಬಿದ್ದು ಗಾಯಗೊಂಡಿದ್ದ ನಿಟ್ಟೆ ಗ್ರಾಮದ ಅಂಬಡೆಕಲ್ಲು ನಿವಾಸಿ ಗಂಗಾ (68 ) ಅವರು ಫೆ. 5ರಂದು ಮೃತಪಟ್ಟಿರುತ್ತಾರೆ. ಫೆ. 2ರಂದು ಘಟನೆ ನಡೆದಿದ್ದು, ಗಂಗಾ ಅವರನ್ನು ಕಾರ್ಕಳದ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ನಿಟ್ಟೆ ಗಾಜ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಫೆ. 4ರಂದು ಮತ್ತೆ ನೋವು ಉಲ್ಬಣಗೊಂಡಿದ್ದರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಅವರು ಶನಿವಾರ ಮೃತಪಟ್ಟರು. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
Recent Comments
ಕಗ್ಗದ ಸಂದೇಶ
on