Wednesday, July 6, 2022
spot_img
Homeಸುದ್ದಿಐಸಿಸ್ ಸಂಘಟನೆಯ ಮುಖ್ಯಸ್ಥನನ್ನು ಹೊಡೆದುರುಳಿಸಿದ ಅಮೆರಿಕಾದ ವಿಶೇಷ ಪಡೆ

ಐಸಿಸ್ ಸಂಘಟನೆಯ ಮುಖ್ಯಸ್ಥನನ್ನು ಹೊಡೆದುರುಳಿಸಿದ ಅಮೆರಿಕಾದ ವಿಶೇಷ ಪಡೆ

ಜಗತ್ತಿಗೆ ಕಂಟಕವಾಗಿದ್ದ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಇಬ್ರಾಹಿಂ ಅಲ್‌-ಹಶಿಮಿ ಅಲ್‌-ಖುರೈಷಿಯನ್ನು ಅಮೆರಿಕದ ವಿಶೇಷ ಪಡೆಗಳು ಸಿರಿಯಾದಲ್ಲಿ ಹೊಡೆದುರುಳಿಸಿರುವುದಾಗಿ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಸಿರಿಯಾದ ವಾಯವ್ಯ ಭಾಗದ ಇದ್ಲಿಬ್‌ ಪ್ರಾಂತ್ಯದಲ್ಲಿ ನಡೆದ ಒಸಾಮಾ ಬಿನ್‌ ಲಾಡೆನ್ ಹತ್ಯೆ ಮಾದರಿಯ ದಾಳಿಯಂತಹ ವಿಶೇಷ ಕಾರ್ಯಾಚರಣೆಯಲ್ಲಿ ಆತನನ್ನು ಹತ್ಯೆಗೈಯ್ಯಲಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಅಮೆರಿಕದ ವಿಶೇಷ ಪಡೆಗಳು ಇದ್ಲಿಬ್‌ ಪ್ರಾಂತ್ಯದ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿದ್ದು, 2 ತಾಸು ಗುಂಡಿನ ಚಕಮಕಿ ನಡೆದಿದೆ. ಈ ದಾಳಿಗೆ ಹೆದರಿದ ಅಲ್‌ಖುರೈಷಿ ತನ್ನನ್ನು ತಾನು ಬಾಂಬ್‌ ಮೂಲಕ ಸ್ಫೋಟಿಸಿಕೊಂಡಿದ್ದು, ಕುಟುಂಬ ಸಹಿತ ನಾಶವಾಗಿದ್ದಾನೆ ಎಂದು ಜೋ ಬೈಡೆನ್ ತಿಳಿಸಿದ್ದಾರೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!