ಉಡುಪಿ: ಕುಂದಾಪುರ ಸರ್ಕಾರಿ ಕಾಲೇಜಿಗೆ ಗುರುವಾರ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿದೆ.
26 ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್ ಧರಿಸಿ ಕಾಲೇಜಿಗೆ ಬಂದಾಗ ಗೇಟಿನಲ್ಲಿಯೇ ಅವರನ್ನು ತಡೆದ ಕಾಲೇಜು ಪ್ರಾಂಶುಪಾಲ ಬಿ. ಜಿ. ರಾಮಕೃಷ್ಣ ಹಿಜಾಬ್ ಇಲ್ಲದೇ ಬಂದರೆ ಮಾತ್ರ ಪ್ರವೇಶ ನೀಡುವುದಾಗಿ ಹೇಳಿದರು. ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿನಿಯರು ಪ್ರಾಂಶುಪಾಲರೊಂದಿಗೆ ವಾಗ್ವಾದಕ್ಕಿಳಿದು ಬೇಡಿಕೊಂಡರೂ ಪ್ರಾಂಶುಪಾಲರು ಅನುಮತಿ ನೀಡಲಿಲ್ಲ.
ವಸ್ತ್ರ ಸಂಹಿತೆ ಪಾಲಿಸುವಂತೆ ಇರುವ ಸರ್ಕಾರದ ಆದೇಶ ಪಾಲಿಸಿದರೆ ಮಾತ್ರ ಕಾಲೇಜಿಗೆ ಪ್ರವೇಶ ನೀಡಲಾಗುವುದು. ಬುಧವಾರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನೇತೃತ್ವದ ಸಭೆಯಲ್ಲೂ ಇದನ್ನೇ ನಿರ್ಣಯಿಸಲಾಗಿತ್ತು ಎಂದು ತಿಳಿಸಿದರು.
ಪ್ರಾಂಶುಪಾಲರ ಹೇಳೀಕೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ ವಿದ್ಯಾರ್ಥಿನಿಯರು, ವಸ್ತ್ರ ಸಂಹಿತೆಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸರ್ಕಾರ ಹೊರಡಿಸಿದ ಆದೇಶ ಉಡುಪಿ ಬಾಲಕೀಯರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಮಾತ್ರ ಸೀಮಿತವಾದದ್ದು, ಕುಂದಾಪುರ ಜ್ಯೂನಿಯರ್ ಕಾಲೇಜಿಗಲ್ಲ, ಆದ್ದರಿಂದ ಹಿಜಾಬ್ ಧರಿಸಿ ಬರಲು ಅನುಮತಿ ನೀಡಬೇಕು. ಪ್ರವೇಶ ಪಡೆಯುವಾಗ ಹಿಜಾಬ್ ಧರಿಸುವಂತಿಲ್ಲ ಎಂಬ ನಿಯಮ ವಿಧಿಸದೆ ಪರೀಕ್ಷೆಗೆ ಎರಡು ತಿಂಗಳಿರುವಾಗ ಏಕಾಏಕಿ ಹಿಜಾಬ್ ಧರಿಸುವಂತಿಲ್ಲ ಎಂದರೆ ಹೇಗೆ ಎಂದು ವಿದ್ಯಾರ್ಥಿನಿಯರು ಪ್ರಾಂಶುಪಾಲರನ್ನು ಪ್ರಶ್ನಿಸಿದರು.
ಆದರೆ ವಿದ್ಯಾರ್ಥಿನಿಯರ ಮಾತಿಗೆ ಪ್ರಾಂಸುಪಾಲರು ಕಿವಿಗೊಡದೆ ಕಾಲೇಜ್ ಗೇಟ್ ಹಾಕಿದರು. ಕಾಲೇಜಿಗೆ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.
ಹಿಜಾಬ್ ಧರಿಸಿ ಬಂದವರಿಗೆ ಕಾಲೇಜ್ ಗೇಟ್ ಬಂದ್
Recent Comments
ಕಗ್ಗದ ಸಂದೇಶ
on