ವರ್ಲ್ಡ್ ಗೇಮ್ಸ್ ಅಥ್ಲೆಟ್ ಆಫ್ ದಿ ಇಯರ್ ಪ್ರಶಸ್ತಿ ಪಡೆದ ಭಾರತದ ಹಾಕಿ ಗೋಲ್‌ ಕೀಪರ್ ಶ್ರೀಜೇಶ್‌

ಟೋಕಿಯೋ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹಾಕಿ ಇಂಡಿಯಾ ಗೋಲ್‌ಕೀಪರ್ ಶ್ರೀಜೇಶ್‌ ʼವರ್ಲ್ಡ್ ಗೇಮ್ಸ್ ಅಥ್ಲೆಟ್ ಆಫ್ ದಿ ಇಯರ್ʼ ಪ್ರಶಸ್ತಿಯನ್ನು ಜ.31 ರಂದು ಸ್ವೀಕರಿಸಿದ್ದಾರೆ.
ಭಾರತದ ಹಾಕಿ ಗೋಲ್‌ಕೀಪರ್ ಶ್ರೀಜೇಶ್ 2021 ರ ವರ್ಲ್ಡ್ ಗೇಮ್ಸ್ ಅಥ್ಲೆಟ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದಿದ್ದು, ಈ ಪ್ರಶಸ್ತಿ ಪಡೆದ ಎರಡನೇ ಹಾಕಿ ಆಟಗಾರ ಎನಿಸಿಕೊಂಡಿದ್ದಾರೆ. 2020 ರಲ್ಲಿ, ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ 2019ರ ಅತ್ಯುತ್ತಮ ಪ್ರದರ್ಶನಕ್ಕಾಗಿ ವಿಶ್ವ ಕ್ರೀಡಾಕೂಟದ ಅಥ್ಲೀಟ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಜೇಶ್(33), ತನ್ನನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಕ್ಕಾಗಿ ಅಂತರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಹೆಚ್) ಗೆ ಧನ್ಯವಾದಗಳನ್ನು ಅರ್ಪಿಸಿದರು.
ಪ್ರಶಸ್ತಿಗಾಗಿ ಸ್ಪೇನ್‌ನ ಆಲ್ಬರ್ಟೊ ಜೀನ್ಸ್ ಲೋಪೆಜ್ ಮತ್ತು ಇಟಲಿಯ ಮಿಚೆಲ್ ಗಿಯೋರ್ಡಾನೊ ಅವರೊಂದಿಗೆ ಸ್ಪರ್ಧಿಸಿ ಶ್ರೀಜೇಶ್ 1,27,647 ಮತಗಳಿಂದ ಗೆದ್ದರು. ಮತ್ತೊಂದೆಡೆ ಶ್ರೀಜೇಶ್ 244 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.





























































































































































































































error: Content is protected !!
Scroll to Top