ಕಾರ್ಕಳ : ಅಸಂಘಟಿತ ಕೃಷಿ ಮತ್ತು ಕೂಲಿ ಕಾರ್ಮಿಕರು ಇ-ಶ್ರಮ್ ಕಾರ್ಡ್ ನೋಂದಣಿ ಮಾಡಿಸುವಂತೆ ಭಾರತೀಯ ಕಿಸಾನ್ ಸಂಘ ಮನವಿ ಮಾಡಿಕೊಂಡಿದೆ. ಫೆ. 1ರಂದು ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿ ಸಭೆಯು ಉಮಾನಾಥ ರಾನಡೆ ಅಧ್ಯಕ್ಷತೆಯಲ್ಲಿ ಸಂಘದ ಕಾರ್ಯಾಲಯದಲ್ಲಿ ನಡೆಯಿತು.
ಮೆಸ್ಕಾಂ ಸರಬರಾಜು ಕಂಪೆನಿ ವಿದ್ಯುತ್ ದರ ಏರಿಕೆಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಗ್ರಾಹಕರ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ನಮ್ಮ ಸಂಘದ ಪದಾಧಿಕಾರಿಗಳು ಈಗಾಗಲೇ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ನವೀನ್ಚಂದ್ರ ಜೈನ್ ತಿಳಿಸಿದರು
ಮುನಿಯಾಲು ಗಣೇಶ್ ಶೆಣೈ ಅಣಬೆ ಕೃಷಿ ಬಗ್ಗೆ, ದಿನೇಶ್ ನಾಯಕ್ ವಿಟ್ಲ ಔಷಧೀಯ ಗಿಡಗಳ ಬಗ್ಗೆ ಮಾಹಿತಿ ನೀಡಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಟ್ ಇರ್ವತ್ತೂರು, ಕೆ.ಪಿ. ಭಂಡಾರಿ ಕೆದಿಂಜೆ, ಗೋವಿಂದ ರಾಜ್ ಭಟ್, ಅನಂತ ಭಟ್, ಮೋಹನ್ದಾಸ್ ಅಡ್ಯಂತಾಯ ಹಾಗೂ ತಾಲೂಕು ಮತ್ತು ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಖಜಾಂಚಿ ಹರೀಶ್ ಕಲ್ಯಾ ಕಾರ್ಯಕ್ರಮ ನಿರ್ವಹಿಸಿದರು.
ಅಸಂಘಟಿತ ಕೃಷಿ ಮತ್ತು ಕೂಲಿ ಕಾರ್ಮಿಕರು ಇ-ಶ್ರಮ್ ಕಾರ್ಡ್ ನೋಂದಣಿ ಮಾಡಿಸುವಂತೆ ಭಾರತೀಯ ಕಿಸಾನ್ ಸಂಘ ಮನವಿ
Recent Comments
ಕಗ್ಗದ ಸಂದೇಶ
on