ಬೆಂಗಳೂರು: ಕೋವಿಡ್ ನಂತರದ ಭಾರತದ ಆರ್ಥಿಕತೆಯ ಬಲ ಹೆಚ್ಚಿಸುವ ಬಜೆಟ್ ಇದಾಗಿದ್ದು ಬೆಳವಣಿಗೆಗೆ ಪೂರಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಮೂಲಸೌಕರ್ಯ ವಲಯದಲ್ಲಿ ದೊಡ್ಡ ಉತ್ತೇಜನ ನೀಡಲಾಗಿದ್ದು, ಇವತ್ತಿನ ಕೇಂದ್ರ ಬಜೆಟ್ ಕೋವಿಡ್ ಕಾಲದ ಮೊದಲ ಬಜೆಟ್ ಆಗಿದೆ. ಎರಡು ಅಲೆಗಳ ಕರಿಛಾಯೆಯಿಂದ ಆರ್ಥಿಕತೆ ಹಿಂಜರಿತ ಆಗಿತ್ತು ಈ ಬಾರಿ ಅರ್ಥಿಕತೆ ಹೆಚ್ಚಿಸಲು ಆದ್ಯತೆ ನೀಡಲಾಗಿದ್ದು ಉತ್ಪಾದನೆ ಹೆಚ್ಚಿಸುವತ್ತಲೂ ಗಮನ ನೀಡಲಾಗಿದೆ ಎಂದು ಶ್ಲಾಘಿಸಿದ್ದಾರೆ.
ಗ್ರಾಮೀಣ ಭಾರತ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಸಶಕ್ತವಾಗಿದೆ, ನಗರಗಳ ಅಭಿವೃದ್ಧಿಗೆ ಹೊಸತನ ಕೊಡಲು ಡಿಜಿಟಲೈಸೇಷನ್ ಮಾಡಲಾಗಿದ್ದು ಆರ್ಥಿಕತೆಯನ್ನು ಸುಸ್ಥಿರಗೊಳಿಸುವ ಬಜೆಟ್ ಇದಾಗಿದೆ. ಸಾರಿಗೆಗೆ ದೊಡ್ಡ ಮೊತ್ತ ನೀಡಲಾಗಿದೆ. ನಗರ, ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಸಮನಾದ ಒತ್ತು ನೀಡಲಾಗಿದೆ. ಎಣ್ಣೆ ಕಾಳುಗಳ ಆಮದಿಗೆ ಒತ್ತು ನೀಡಲಾಗಿದೆ. ರಕ್ಷಣಾ ವಲಯದಲ್ಲಿ 68% ರಷ್ಟು ನಮ್ಮ ದೇಸೀ ಉತ್ಪಾದಕ ಬಿಡಿಭಾಗಗಳ ತಯಾರಿಗೆ ಒತ್ತು ನೀಡಲಾಗಿದೆ. ಹೂಡಿಕೆ ದೊಡ್ಡ ಪ್ರಮಾಣದಲ್ಲಿ ಆಗಿದೆ ಎಂದು ಹೇಳಿದರು. ಮುಂದಿನ ಒಂದು ವರ್ಷ ಆರ್ಥಿಕ ಬೆಳವಣಿಗೆಗೆ ಪೂರಕವಾದುದು. ಸಾಮಾನ್ಯ ಜನರ ದೃಷ್ಟಿಯಿಂದಲೂ ಆದ್ಯತೆ ಕೊಡಲಾಗಿದ್ದು, ಸಣ್ಣ ಕೈಗಾರಿಕೆಗಳಿಗೆ 5 ಲಕ್ಷ ಕೋಟಿ ರೂ. ಇಟ್ಟಿದ್ದಾರೆ. ಇದರಿಂದ ನಮ್ಮ ರಾಜ್ಯಕ್ಕೂ ಅನುಕೂಲ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳಲ್ಲೂ ರಾಜ್ಯಕ್ಕೆ ಅನುಕೂಲವಾಗಿದೆ. ಆಡಳಿತದಲ್ಲಿ ಆಧುನಿಕತೆ ತರುವ ಬಜೆಟ್ ಇದಾಗಿದ್ದು ಕರ್ನಾಟಕದ ಮಟ್ಟಿಗೆ ಬಂಡವಾಳ ಹೂಡಿಕೆ ವಲಯಕ್ಕೆ ಉತ್ತೇಜನ ದೊರೆತಿದೆ. ಈ ಸಲ 29 ಸಾವಿರ ಕೋಟಿ ರೂ. ಬಂಡವಾಳ ನಿರೀಕ್ಷೆ ಮಾಡಲಾಗಿದೆ. ಮೆಟ್ರೋಗೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆ ಇದೆ.
ಪ್ರವಾಸೋದ್ಯಮ, ಸೇವಾವಲಯಗಳಿಗೂ ಉತ್ತೇಜನ ದೊರೆಯುತ್ತದೆ. ನದಿ ಜೋಡಣೆಯ ಡಿಪಿಆರ್ ಗೆ ರಾಜ್ಯಗಳು ಒಪ್ಪಿದರೆ ಚಾಲನೆ ಕೊಡುವುದಾಗಿ ಕೇಂದ್ರ ಹೇಳಿದೆ. ಡಿಪಿಆರ್ ಮಾಡುವಾಗ ನಮ್ಮ ರಾಜ್ಯದ ಪಾಲು ಸರಿಯಾದ ರೀತಿಯಲ್ಲಿ ನಿರ್ಧಾರ ಆಗಬೇಕು. ಯುಪಿಎ ಅವಧಿಯಲ್ಲಿ ಸರಿಯಾಗಿ ನಿರ್ಧಾರ ಆಗಿರ್ಲಿಲ್ಲ. ನಮ್ಮ ಪಾಲು ನಿರ್ಧಾರ ಆಗೋವರೆಗೂ ಡಿಪಿಆರ್ ಮಾಡಲು ಒಪ್ಪಲ್ಲ ಇದೇ ನಿಲುವಿಗೆ ನಾವು ಅಂಟಿಕೊಂಡಿರುತ್ತೇವೆ ಎಂದು ಪ್ರತಿಪಾದಿಸಿದ್ದಾರೆ.
ಕೇಂದ್ರ ಬಜೆಟ್ ರಾಷ್ಟ್ರದ ಆರ್ಥಿಕಬಲ ವೃದ್ಧಿಸುವ ಬಜೆಟ್: ಸಿಎಂ ಬೊಮ್ಮಾಯಿ
Recent Comments
ಕಗ್ಗದ ಸಂದೇಶ
on