ಅಜೆಕಾರು : ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದ ಯುವತಿ ನಾಪತ್ತೆಯಾದ ಘಟನೆ ಜ.30 ರಂದು ಅಜೆಕಾರು ವ್ಯಾಪ್ತಿಯ ಕಡ್ತಲದಲ್ಲಿ ನಡೆದಿದೆ.
ಸುನಿತಾ (29 ವ.) ನಾಪತ್ತೆಯಾದ ಯುವತಿ. ಕೂಲಿ ಕೆಲಸ ಮಾಡಿಕೊಂಡಿದ್ದ ಆಕೆ ಬೆಳಗ್ಗೆ ಕಡ್ತಲ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು, ಸಂಜೆಯಾದರೂ ಮನೆಗೆ ಬಂದಿಲ್ಲ. ಸಂಬಂಧಿಕರ ಮನೆಗೂ ಹೋಗಿಲ್ಲ. ಅಜೆಕಾರು ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಈಕೆ ಪ್ರಿಯಕರನೊಂದಿಗೆ ತೆರಳಿರಬೇಕೆಂಬ ಶಂಕೆ ಸ್ಥಳೀಯವಾಗಿ ವ್ಯಕ್ತವಾಗುತ್ತಿದೆ.
ಅಜೆಕಾರು : ಪೇಟೆಗೆ ಹೋದ ಯುವತಿ ನಾಪತ್ತೆ
Recent Comments
ಕಗ್ಗದ ಸಂದೇಶ
on