Tuesday, May 17, 2022
spot_img
Homeಸ್ಥಳೀಯ ಸುದ್ದಿಮುಡಾರು : ಬೇಂಗೂರು-ಪೊಸಲಾಯಿ ರಸ್ತೆಯ ಗುದ್ದಲಿ ಪೂಜೆ

ಮುಡಾರು : ಬೇಂಗೂರು-ಪೊಸಲಾಯಿ ರಸ್ತೆಯ ಗುದ್ದಲಿ ಪೂಜೆ

ಮುಡಾರು ಗ್ರಾಮದ ಬೇಂಗೂರು ಪೊಸಲಾಯಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 1ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿ ಜ. 31ರಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನಿಲ್‌ ಕುಮಾರ್‌ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಸಚಿವರಾದ ಬಳಿಕ ಪ್ರಥಮ ಬಾರಿಗೆ ಆಗಮಿಸಿದ ಈ ಸಂದರ್ಭದಲ್ಲಿ ಗ್ರಾಮದ ಜನತೆ ಮತ್ತು ಸದಸ್ಯರು ಸಚಿವರನ್ನು ಗೌರವಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷ ಸುರೇಶ್ ಶೆಟ್ಟಿ, ಉಪಾಧ್ಯಕ್ಷೆ ಅಮೃತಾ ಪ್ರಭು, ಪಕ್ಷದ ಪ್ರಮುಖರಾದ ಮಹಾವೀರ್ ಹೆಗ್ಡೆ, ಜಿ.ಪಂ.ಮಾಜಿ ಸದಸ್ಯ ಉದಯ್ ಎಸ್. ಕೋಟ್ಯಾನ್, ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯೆ ವಿನಯಾ ಡಿ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.


ಜ.31ರಂದು ಸಚಿವ ವಿ. ಸುನಿಲ್ ಕುಮಾರ್ ನೂತನ ಪಶು ವೈದ್ಯಕೀಯ ಆಸ್ಪತ್ರೆಯ ಉದ್ಘಾಟನೆಯನ್ನು ನೆರವೇರಿಸಿದರು. ತಾಲೂಕು ಪಶು ವೈದ್ಯಕೀಯ ಅಧಿಕಾರಿ ಡಾ.ರಾಜಶೇಖರ್ ಕಾಸಭಾಗ, ಬಜಗೋಳಿ ಪಶುವೈದ್ಯ ಡಾ.ಜಾರಪ್ಪ ಪೂಜಾರಿ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ರಜತ್ ರಾಮ್ ಮೋಹನ್, ರೇಖಾ.ಎಸ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!