ನವದೆಹಲಿ: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, 19 ಕೆಜಿಯ ಪ್ರತೀ ಸಿಲಿಂಡರ್ ಬೆಲೆಯಲ್ಲಿ 91.50 ರೂ. ಇಳಿಕೆ ಮಾಡಲಾಗಿದೆ.
ಎಲ್ಪಿಜಿ ಸಿಲಿಂಡರ್ಗಳ ನವೀಕೃತ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಬಿಡುಗಡೆ ಮಾಡಿದ್ದು, 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು 91.50 ರೂಪಾಯಿ ಕಡಿತಗೊಳಿಸಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,907 ರೂಪಾಯಿ ಆಗಿದೆ.
ಡಿಸೆಂಬರ್ವರೆಗೂ ಏರಿಕೆಯಾಗುತ್ತಿದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆ ಜನವರಿಯಲ್ಲಿ 102 ರೂಪಾಯಿ ಇಳಿಕೆಯಾಗಿತ್ತು. ಇದೀಗ ಫೆಬ್ರವರಿಯಲ್ಲಿ ಕೂಡ ಬೆಲೆ ಕಡಿತಗೊಂಡಿದ್ದು ಗ್ರಾಹಕರು ಅಂದರೆ ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ನಿರಾಳತೆ ಮೂಡಿಸಿದೆ.
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 91.50 ರೂ. ಇಳಿಕೆ
