ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು 2022-23 ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ತೆರಿಗೆ ಇಳಿಕೆ ಮಾಡಿರುವುದರ ಪರಿಣಾಮ ಒಂದಷ್ಟು ಉತ್ಪನ್ನ, ಪದಾರ್ಥಗಳ ಬೆಲೆಯೂ ಇಳಿಕೆಯಾಗಿದೆ. ಬೆಲೆ ಅಗ್ಗವಾಗಿರುವ ವಸ್ತು/ ಪದಾರ್ಥಗಳ ವಿವರ ಹೀಗಿದೆ.
ಮೊಬೈಲ್, ಚಾರ್ಜರ್, ಚಿನ್ನ, ವಜ್ರಾಭರಣ, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನಗಳು, ವಿದೇಶಿ ಉತ್ಪನ್ನಗಳ ಬೆಲೆ ಇಳಿಕೆ ಮಾಡಿದೆ. ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳ ಮೇಲಿನ ಕಸ್ಟಮ್ ಡ್ಯೂಟಿ ಇಳಿಕೆ, ಸ್ಟೀಲ್ ಸ್ಕ್ರಾಪ್ ಮೇಲಿನ ರಿಯಾಯಿತಿ ಕಸ್ಟಮ್ಸ್ ಸುಂಕ, ವಿದೇಶಿ ಯಂತ್ರೋಪಕರಣಗಳು, ಕೃಷಿ ಸರಕುಗಳು ಸಹಕಾರದ ಹೆಚ್ಚುವರಿ ಶುಲ್ಕ ಶೇ.12-7 ಕ್ಕೆ ಇಳಿಕೆಯಾಗಿದೆ.
ತೆರಿಗೆ ಏರಿಕೆ ಕಂಡ ವಸ್ತುಗಳು
ಕ್ರಿಪ್ಟೋಕರೆನ್ಸಿ ಮೇಲಿನ ಹೂಡಿಕೆ, ಆಮದು ಮಾಡಿಕೊಳ್ಳಲಾಗುವ ವಸ್ತುಗಳು, ಛತ್ರಿಗಳ ಮೇಲಿನ ಸುಂಕ, ಚಿನ್ನದ ತದ್ರೂಪಿ ಆಭರಣಗಳು, ಬ್ಲೆಂಡಿಂಗ್ ರಹಿತ ಇಂಧನ, ಕ್ಯಾಪಿಟಲ್ ಸರಕುಗಳ ತೆರಿಗೆಯಲ್ಲಿ ಏರಿಕೆ ಕಂಡಿದೆ
ಉಳಿದಂತೆ ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಯಾವುದೇ ಬದಲಾವಣೆ ಮಾಡದೇ ಈ ಹಿಂದೆ ಇದ್ದ ತೆರಿಗೆ ಪದ್ಧತಿಯನ್ನೇ ಮುಂದುವರೆಸಿದೆ.