ಕಾರ್ಕಳ : ಸಿವಿಲ್ ಇಂಜಿನೀಯರ್ಸ್ ಅಸೋಸಿಯೇಶನ್ನ ವಾರ್ಷಿಕ ಕ್ರೀಡಾಕೂಟ ವು ಜ.30ರಂದು ಸ್ವರಾಜ್ ಮೈದಾನದಲ್ಲಿ ನಡೆಯಿತು. ಸಿವಿಲ್ ಇಂಜನೀಯರ್ಸ್ ಅಸೋಸಿಯೇಶನ್ಸ್ ಅಧ್ಯಕ್ಷ ರಾಜೇಶ್ ಕುಂಟಾಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕ್ರೀಡೆಯಿಂದ ಸಂಘಟನೆ ಸಾಧ್ಯ. ಸಂಘಟನೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗುವುದು ಎಂದರು.
ಅಸೋಸಿಯೇಶನ್ ಸ್ಥಾಪಕಾಧ್ಯಕ್ಷ ಪ್ರಶಾಂತ ಬೆಳಿರಾಯ, ಗೌರವ ಸಲಹೆಗಾರ ಹೆಚ್. ರಾಜಣ್ಣ, ದೈಹಿಕ ಶಿಕ್ಷಣ ಶಿಕ್ಷಕ ನಿಶಾಂತ್ ಪೂಜಾರಿ, ಕಾರ್ಯದರ್ಶಿ ಮಂಜುನಾಥ್ ಹೆಗ್ಡೆ, ಕೋಶಾಧಿಕಾರಿ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ಹರೀಶ ಕುಮಾರ್, ಹರೀಶ್ ಅಂಚನ್, ದಿವಾಕರ ಶೆಟ್ಟಿ, ಹಿತೇಶ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಜಯ್ರಾಜ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ಸುಶಾಂತ್ ವಂದಿಸಿದರು.
ಸಿವಿಲ್ ಇಂಜಿನೀಯರ್ಸ್ ಅಸೋಸಿಯೇಶನ್ ವಾರ್ಷಿಕ ಕ್ರೀಡಾಕೂಟ
Recent Comments
ಕಗ್ಗದ ಸಂದೇಶ
on