Tuesday, July 5, 2022
spot_img
HomeUncategorizedಭಾಗವತ ಮಯ್ಯರಿಗೆ ಶ್ರೀಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ ಪ್ರದಾನ

ಭಾಗವತ ಮಯ್ಯರಿಗೆ ಶ್ರೀಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ ಪ್ರದಾನ

ಕಾರ್ಕಳ : ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಸಂದರ್ಭ ಬಡಗುತಿಟ್ಟಿನ ಮೇರು ಕಲಾವಿದ ರಾಘವೇಂದ್ರ ಮಯ್ಯ ಹಾಲಾಡಿ ಅವರಿಗೆ ಶ್ರೀ ಕುಂದೇಶ್ವರ ಸಮ್ಮಾನ್‌-೨೦೨೨ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಯ್ಯ ಅವರು, ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಕ್ಕೆ ಇದು ಸಿಕ್ಕ ಮಹಾನ್‌ ಗೌರವ. ಇದನ್ನು ನಾರ್ಣಪ್ಪ ಉಪ್ಪೂರರಿಗೆ ಅರ್ಪಿಸುತ್ತೇನೆ. ಬಡಗು ತೆಂಕು ಪರಿಭೇದ ಇಲ್ಲದೇ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಮಾದರಿ. ಮುಂದೆಯೂ ಕಲಾವಿದರಿಗೆ ಈ ರೀತಿಯ ಪ್ರೋತ್ಸಾಹ ಸಿಗುವ ಮೂಲಕ ಯಕ್ಷಗಾನಕ್ಕೆ ಮನ್ನಣೆ ದೊರಕಲಿ ಎಂದರು. ಇದೇ ಸಂದರ್ಭ ಶ್ರೀಕುಂದೇಶ್ವರ ದೇವರ ಕುರಿತಾದ ತಾವು ರಚಿಸಿದ ಪದ್ಯವನ್ನು ಹಾಡಿದರು.

ಯ್ಯ ಅವರು ಕಲಾವಿದರಿಗೆ ಪ್ರೇರಣೆ- ಜಿತೇಂದ್ರ
‌ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಮಾತನಾಡಿ, ಮಾಣಿಕ್ಯ ಮಣಿ ಬಿರುದಾಂಕಿತ, ಅಭಿನವ ಕಾಳಿಂಗ ನಾವಡ ಎಂದೇ ಪ್ರಸಿದ್ಧರಾದ ಮಯ್ಯ ಅವರು, ನಾಲ್ಕು ದಶಕಗಳ ಕಾಲ ಬಡಗು ತಿಟ್ಟಿನಲ್ಲಿ ಮೇರು ಭಾಗವತರಾಗಿ ಮೆರೆದವರು. ಅನೇಕ ಕಲಾವಿದರಿಗೆ ಪ್ರೇರಣೆಯಾಗಿರುವ ಮಹಾನ್‌ ಭಾಗವತರಿಗೆ ಸನ್ಮಾನಿಸುವ ಮೂಲಕ ಯಕ್ಷಗಾನಕ್ಕೆ ಗೌರವ ಅರ್ಪಿಸುತ್ತಿದ್ದೇವೆ ಎಂದರು.
ಯಕ್ಷಗುರು ಕದ್ರಿ ರಾಮಚಂದ್ರ ಭಟ್‌ ಎಲ್ಲೂರು ಮಾತನಾಡಿ, ಯಕ್ಷಗಾನದ ಪ್ರಾತಃ ಸ್ಮರಣೀಯರಲ್ಲಿ ಒಬ್ಬರಾಗಿರುವ ಮಯ್ಯ ಅವರು, ಬಡಗು ಮೇಳಗಳಲ್ಲಿ ಮಾತ್ರವಲ್ಲದೆ ತೆಂಕಿನ ದೇಂತಡ್ಕ ಮೇಳದಲ್ಲಿಯೂ ಭಾಗವತರಾಗಿಯೂ ಹೆಸರು ಮಾಡಿದ್ದಾರೆ ಎಂದರು.
ದಿ. ರಾಘವೇಂದ್ರ ಭಟ್‌ ಅವರ ಧರ್ಮಪತ್ನಿ ಗಂಗಾ ಆರ್. ಭಟ್‌, ಧರ್ಮದರ್ಶಿ ಕೃಷ್ಣ ರಾಜೇಂದ್ರ ಭಟ್‌, ವೇದಮೂರ್ತಿ ರವೀಂದ್ರ ಭಟ್‌, ಸುಧೀಂದ್ರ ಭಟ್‌, ಸುಜ್ಞೇಂದ್ರ ಭಟ್, ರೆಂಜಾಳ ಸೋದೆ ಮಠದ ಧರ್ಮದರ್ಶಿ ಸುಬ್ರಹ್ಮಣ್ಯ ಭಟ್‌, ಕುಂಜತ್ತೋಡಿ ವಾಸುದೇವ ಭಟ್‌ ಕದ್ರಿ, ಪ್ರಗತಿಪರ ಕೃಷಿಕ ಸತೀಶ್‌ ಭಟ್, ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌, ಉದ್ಯಮಿ ಸಂತೋಷ್‌ ಕುಮಾರ್ ಜೈನ್‌ ರೆಂಜಾಳ, ಪಲ್ಲವಿ ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭೂ ದಾನಿಗಳಿಗೆ ಸನ್ಮಾನ
ದೇವಸ್ಥಾನ ಮತ್ತು ಊರಿನ ಸಂಪರ್ಕ ರಸ್ತೆಗಾಗಿ ಭೂಮಿಯನ್ನು ನೀಡಿದ ಥಾಮಸ್‌, ಗ್ರೀಗೊರಿ ವಾಸ್‌ ಅವರ ಪುತ್ರ ವಿನ್ಸಂಟ್‌, ಭಂಡಾರಿ ಮನೆತನದ ಪರವಾಗಿ ಸುರೇಶ್‌ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಸಿರಿಯಣ್ಣ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ರತ್ನಾಕರ ರಾವ್‌, ಗಂಗಮ್ಮ, ಯುವ ಉದ್ಯಮಿ ಸತೀಶ್‌ ಭಟ್‌ ಕುಂದೇಶ್ವರ ದಾನಿಗಳನ್ನು ಅಭಿನಂದಿಸಿದರು. ಜಿತೇಂದ್ರ ಕುಂದೇಶ್ವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ರವೀಂದ್ರ ಭಟ್‌ ವಂದಿಸಿದರು.

ಯಕ್ಷಗಾನ
ರಂಜಿನಿ ಲಕ್ಷ್ಮೀನಾರಾಯಣ ರಾವ್‌, ರಂಗಿಣಿ ಉಪೇಂದ್ರ ರಾವ್‌, ಪ್ರತಿಜ್ಞಾ, ವೈಶಾಲಿ, ನಮಿತ, ನಮ್ರತಾ, ರಿಶಿಕಾ ಕುಂದೇಶ್ವರ ಅವರಿಂದ ಸುಗಮ ಸಂಗೀತ ನಡೆಯಿತು. ಕದ್ರಿ ಯಕ್ಷಕೂಟದ ಸಂಚಾಲಕ ರಾಮಚಂದ್ರ ಭಟ್‌ ಎಲ್ಲೂರು ಅವರಿಂದ ಯೋಗೀಶ್‌ ಅವರ ಭಾಗವತಿಕೆ ಮತ್ತು ರಂಜಿತಾ ಎಲ್ಲೂರು ಪ್ರಧಾನ ಭೂಮಿಕೆಯಲ್ಲಿ ರಾಣಿ ಶಶಿಪ್ರಭೆ ಯಕ್ಷಗಾನ ಪ್ರದರ್ಶನಗೊಂಡಿತು.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!