ಕರಿಯಕಲ್ಲು : ಉಚಿತ ಕಣ್ಣಿನ ತಪಾಸಣಾ ಶಿಬಿರ

ಕಾರ್ಕಳ : ಕರಿಯಕಲ್ಲು ಶ್ರೀ ಸತ್ಯಸಾರಾಮಣಿ ಅಲೇರ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರ ಸಮಿತಿ ಇಂದಿರಾನಗರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಉಡುಪಿ ಸಹಯೋಗದೊಂದಿಗೆ ಕ್ಷೇತ್ರದ ವಠಾರದಲ್ಲಿ ಜ. 30ರಂದು ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಪ್ರಸಾದ್‌ ನೇತ್ರಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಮಧುಕರ್‌, ಸತ್ಯಸಾರಮಣಿ ಅಲೇರಾ ಪಂಜುರ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷೆ ನಿಶಾ ನಾಯರ್‌, ಹಿರಿಯಂಗಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್‌ ರಾವ್‌, ಜಿ.ಪಂ. ಮಾಜಿ ಸದಸ್ಯೆ ದಿವ್ಯಾ ಗಿರೀಶ್‌ ಅಮೀನ್‌, ಗ್ರಾ.ಪಂ. ಸದಸ್ಯ ಸತೀಶ್‌ ಅಮೀನ್‌, ವಿಶ್ವ ಹಿಂದು ಪರಿಷತ್‌ ಭಜರಂಗದಳ ಪ್ರಮುಖರಾದ ಜಗದೀಶ್‌ ಪೂಜಾರಿ ಸಾಣೂರು, ವಿಠಲ ಗುರುಸ್ವಾಮಿ, ವಿ.ಹಿ.ಪ. ಸಾಣೂರು ಕಾರ್ಯದರ್ಶಿ ರಜತ್‌ ಜತನ್‌, ಉದ್ಯಮಿ ವಿಜಯ ಶೆಟ್ಟಿ ಉಪಸ್ಥಿತರಿದ್ದರು. ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸುಧಾಕರ ಸಾಲ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!
Scroll to Top