ಅಕ್ರಮ ಗೋ ಸಾಗಾಟ – ಅಜೆಕಾರು ಪೊಲೀಸರಿಂದ ರಕ್ಷಣೆ

ಕಾರ್ಕಳ : ಅಕ್ರಮವಾಗಿ ಗೋವುಗಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ವಾಹನವನ್ನು ಅಜೆಕಾರು ಪೊಲೀಸರು ತಡೆದು 3 ಗೋವುಗಳ ರಕ್ಷಣೆ ಮಾಡಿರುವ ಘಟನೆ ಜ. 30ರ ಮುಂಜಾನೆ ನಡೆದಿದೆ.
ಅಜೆಕಾರು ಎಸ್‌ಐ ಸುದರ್ಶನ ದೊಡಮನಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ದೊಂಡೆರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ 407 ಸರಕು ಸಾಗಾಣಿಕ ಟೆಂಪೋ ಚಾಲನೆಯ ಸ್ಥಿತಿಯಲ್ಲಿ ನಿಂತಿದ್ದು, ಚಾಲಕನಲ್ಲಿ ವಿಚಾರಿಸಿದಾಗ ಸಮರ್ಪಕ ಉತ್ತರ ನೀಡದೇ ಟೆಂಪೋ ವನ್ನು ಮುಂದಕ್ಕೆ ಚಲಾಯಿಸಿರುತ್ತಾನೆ. ಟೆಂಪೋವನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ನಿರ್ಲಕ್ಷಿಸಿ ಚಾಲಕನು ಅತೀ ವೇಗವಾಗಿ ಮುಂದಕ್ಕೆ ಚಲಾಯಿಸಿರುತ್ತಾನೆ. ಬಳಿಕ ಪೊಲೀಸರು ಟೆಂಪೋವನ್ನು ಬೆನ್ನತ್ತಿದ್ದು, ಹರಿಖಂಡಿಗೆ, ಪೆರ್ಡೂರು, ಕುಕ್ಕೆಹಳ್ಳಿ, ಕೆ.ಜಿ. ರೋಡ್, ಸಂತೆಕಟ್ಟೆ, ಕಿನ್ನಿಮುಲ್ಕಿ, ಸಂಪಿಗೆನಗರ, ಪಿತ್ರೋಡಿ, ಉದ್ಯಾವರ ತಲುಪಿ ಅಲ್ಲಿನ ಒಳ ರಸ್ತೆಗಳಲ್ಲಿ ತಿರುಗುತ್ತಾ ಉದ್ಯಾವರ ಹೈವೆಯಿಂದ ಉಡುಪಿ, ಮಣಿಪಾಲ, ಪರ್ಕಳದ ಮೂಲಕ ಹಿರಿಯಡ್ಕದ ಪೆಟ್ರೋಲ್ ಪಂಪ್ ಬಳಿ ಸಾಗಿ ರಸ್ತೆಯ ಬದಿಯಲ್ಲಿ ಟೆಂಪೋವನ್ನು ನಿಲ್ಲಿಸಿ ಚಾಲಕನು ಇಳಿದು ಓಡಿ ಹೋಗಿರುತ್ತಾನೆ.
407 ಸರಕು ಸಾಗಾಣಿಕ ಟೆಂಪೊವನ್ನು ಪರಿಶೀಲಿಸಿದಾಗ ಮುಂಬದಿ ಹಾಗೂ ಹಿಂಬದಿಯಲ್ಲಿ ನಂಬ್ರ ಪ್ಲೇಟ್ ಇರಲಿಲ್ಲ. ಟೆಂಪೋ ಹಿಂಬದಿ ಒಂದು ದನ, ಹೋರಿ ಮತ್ತೊಂದು ಕರು ಕಂಡುಬಂದಿದೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top