ರಾಜ್ಯದಲ್ಲಿ ನೈಟ್‌ ಕರ್ಫ್ಯೂ ರದ್ದು

ಬೆಂಗಳೂರು: ಕೊರೊನಾ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜಾರಿಯಲ್ಲಿದ್ದ ನೈಟ್‌ ಕರ್ಫ್ಯೂ ರದ್ದು ಮಾಡಲಾಗಿದೆ. ಸಿ.ಎಂ ಗೃಹ ಕಛೇರಿ ಕೃಷ್ಣಾದಲ್ಲಿ ಜ.29 ರಂದು ನಡೆದ ಸಭೆಯಲ್ಲಿ ತಜ್ಞರ ಸಲಹೆಯಂತೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಕಂದಾಯ ಸಚಿವ ಆರ್.‌ ಅಶೋಕ್ ತಿಳಿಸಿದರು. ಜ.31 ರಿಂದ ನೈಟ್ ಕರ್ಫ್ಯೂ ರದ್ದು ಮಾಡಲಾಗಿದ್ದು, ಹೊರಾಂಗಣ ಶುಭ ಸಮಾರಂಭಗಳಲ್ಲಿ 300 ಜನ, ಒಳಾಂಗಳ ಶುಭ ಸಮಾರಂಭಗಳಲ್ಲಿ 200 ಜನ ಸೇರಬಹುದು, ಜಿಮ್‌ ಈಜುಕೊಳ, ಸಿನೆಮಾ ಥಿಯೇಟರ್ಗಳಲ್ಲಿ ಶೇ.50 ರಷ್ಟು, ಹೋಟೆಲ್‌, ರೆಸ್ಟೋರೆಂಟ್‌, ನಲ್ಲಿ ಶೇ.100 ರಷ್ಟು ಜನ ಸೇರಬಹುದು, ಧಾರ್ಮಿಕ ಸೇವೆಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಜಾತ್ರೆ, ಪ್ರತಿಭಟನೆ ಮೆರವಣಿಗೆಗಳಿಗೆ ಅವಕಾಶವಿರುವುದಿಲ್ಲ ಎಂದು ಹೇಳಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ. ಸಿ. ನಾಗೇಶ್‌ ಮಾತನಾಡಿ ಬೆಂಗಳೂರಿನಲ್ಲಿ ಜ.31 ಸೋಮವಾರದಿಂದ ಎಲ್ಲಾ ತರಗತಿಗಳೂ ಆರಂಭವಾಗಲಿದೆ, ಮುಂದೆ ವಿದ್ಯಾರ್ಥಿಗಳಲ್ಲಿ ಪೊಸಿಟಿವ್‌ ಕಂಡು ಬಂದಲ್ಲಿ ಕೇವಲ ತರಗತಿಗಳನ್ನು ಮುಚ್ಚಲಾಗುವುದೇ ಹೊರತು ಶಾಲೆ ಮುಚ್ಚುವುದಿಲ್ಲ ಈ ನಿರ್ಧಾರಗಳನ್ನು ಜಿಲ್ಲೆಯ ಡಿ.ಸಿಗಳು ತೆಗೆದುಕೊಳ್ಳುತ್ತಾರೆ, ಎಲ್ಲಾ ಶಾಲೆಗಳಲ್ಲಿ ಕೋವಿಡ್‌ ಟೆಸ್ಟ್‌ ಮತ್ತು ಕೋವಿಡ್‌ ನಿಯಮ ಪಾಲನೆ ಕಡ್ಡಾಯ ಎಂದು ತಿಳಿಸಿದರು.





























































































































































































































error: Content is protected !!
Scroll to Top