ಗಂದೇರ್ಬಲ್: ನಿಷೇಧಿತ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (ಎಲ್ಇಟಿ), ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ನೊಂದಿಗೆ ನಂಟು ಹೊಂದಿದ್ದ ಮೂವರು ಉಗ್ರರನ್ನು ಸಿಆರ್ಪಿಎಫ್ನ 24 ರಾಷ್ಟ್ರೀಯ ರೈಫಲ್ಸ್ ಮತ್ತು 115 ಬೆಟಾಲಿಯನ್ ಪಡೆಗಳೊಂದಿಗೆ ಗಂದೇರ್ಬಾಲ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧತ ಉಗ್ರರನ್ನು ಶೋಪಿಯಾನ್ ಜಿಲ್ಲೆಯ ಬ್ರಾರಿಪೊರಾದ ನಿವಾಸಿ ಫೈಸಲ್ ಮನ್ಜೂರ್, ಝೈಪೊರಾದ ಅಜರ್ ಯಾಕೂಬ್, ಬೇಗಂಕುಲ್ಗಾಂನ ನಿವಾಸಿ ನಾಸಿರ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ.
ಬಂಧಿತ ಉಗ್ರರಿಂದ 2 ಪಿಸ್ತೂಲ್, ಮೂರು ನಿಯತಕಾಲಿಕೆಗಳು, 2 ಚೈನೀಸ್ ಗ್ರೆನೇಡ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ ಮೂವರೂ ತಮಗೆ ಎಲ್ಇಟಿ ಹಾಗೂ ಟಿಆರ್’ಎಫ್ ಉಗ್ರ ಸಂಘಟನೆಗಳೊಂದಿಗೆ ನಂಟಿರುವುದನ್ನು ಒಪ್ಪಿಕೊಂಡಿದ್ದು, ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಜಮ್ಮು-ಕಾಶ್ಮೀರ: ಎಲ್ಇಟಿ, ಟಿಆರ್’ಎಫ್’ನ ಮೂವರು ಉಗ್ರರ ಬಂಧನ
Recent Comments
ಕಗ್ಗದ ಸಂದೇಶ
on