ಕಾರ್ಕಳ : ಸಚಿವ ವಿ. ಸುನಿಲ್ ಕುಮಾರ್ ಅವರು ಜ. 29ರಂದು ಕಾರ್ಕಳದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಜ.29 ರ ಬೆಳಗ್ಗೆ 8 ಗಂಟೆಗೆ ನಿಟ್ಟೆ ಗ್ರಾಮದ ಬೆರಂದೊಟ್ಟು ಗರಡಿ ರಸ್ತೆ ಅಭಿವೃದ್ಧಿಗೆ (೨ ಕೋಟಿ ರೂ.) ಗುದ್ದಲಿ ಪೂಜೆ, 8.45 ಕ್ಕೆ ಬೋಳ ಗ್ರಾಮದ ಇಚ್ಚೋಡಿಗುಡ್ಡೆಯ ರಸ್ತೆಗೆ (೨ ಕೋಟಿ ರೂ.) ಮತ್ತು ಕುಕ್ಕುದಕಟ್ಟೆ ರಸ್ತೆ ಅಭಿವೃದ್ಧಿಗೆ (೧ ಕೋಟಿ ರೂ.) ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.
ಬೆಳಗ್ಗೆ 9.30 ಕ್ಕೆ ನಂದಳಿಕೆ ಗ್ರಾಮದ ಮಾವಿನ ಕಟ್ಟೆ ರಸ್ತೆ ಅಭಿವೃದ್ದಿ (1 ಕೋಟಿ ರೂ.), ಕ್ರಷರ್ ನಿಂದ ಬೋರ್ಡ್ ಶಾಲೆ ರಸ್ತೆ (6 ಕೋಟಿ ರೂ.) ಬೋರ್ಡ್ ಶಾಲೆಯಿಂದ ಸೂಡ ಪಂಚಾಯತ್ ರಸ್ತೆ ಅಭಿವೃದ್ಧಿ (5 ಕೋಟಿ ರೂ. ) ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.
ಬೆಳಗ್ಗೆ 10.15 ಕ್ಕೆ ಬೆಳ್ಮಣ್ ಗ್ರಾಮದ ಅಬ್ಬನಡ್ಕದಿಂದ ಕಳಾಯಿ ರಸ್ತೆಗೆ (1 ಕೋಟಿ ರೂ. ) ಇಂದಾರು ರಸ್ತೆಗೆ (50 ಲಕ್ಷ ರೂ.)ಗೆ ಗುದ್ದಲಿ ಪೂಜೆ ನಡೆಯಲಿದೆ.
ಜ. 30ರಂದು ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧು ಸ್ವಾಮಿ ಶಿವಪುರ ಗ್ರಾಮದ ಸೂರಿಮಣ್ಣು ಪುತ್ರಿ ಬೆಟ್ಟು ಎಂಬಲ್ಲಿ ಅಂದು 12 ಗಂಟೆಗೆ ಕಿಂಡಿ ಅಣೆಕಟ್ಟು ಉದ್ಗಾಟಿಸಲಿದ್ದಾರೆ.
