ಕಾರ್ಕಳ : ಶಿರ್ಡಿ ಸಾಯಿಬಾಬ ಮಂದಿರದಲ್ಲಿ ಫೆ. 14ರಂದು 9ನೇ ವರ್ಷದ ವರ್ಧಂತ್ಯೋತ್ಸವ ನಡೆಯಲಿದೆ. ಅಂದು ಬೆಳಿಗ್ಗೆ 6.30ರಿಂದ ದ್ವಾರಪೂಜೆ, 7.30ಯಿಂದ 8 ಗಂಟೆಯವರೆಗೆ ಕಲಾಶಾಭಿಷೇಕ, ಅನಂತರ ಕಾಕಡ ಆರತಿ, ಪ್ರಸಾದ ವಿತರಣೆ ಜರಗಲಿದೆ. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30ರಿಂದ ರಾತ್ರಿ 8.30ರ ವರೆಗೆ ಸಾಯಿಬಾಬ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಜ. 14 ರ ಬೆಳಗ್ಗೆ 10 ಗಂಟೆಯಿಂದ 12.30 ರವರೆಗೆ ಶಿರ್ಡಿ ಸಾಯಿ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಶಿರ್ಡಿ ಸಾಯಿಬಾಬ ಮಂದಿರದ ಆಡಳಿತ ಮೊಕ್ತೇಸರ, ಶಿರ್ಡಿ ಸಾಯಿ ಪದವಿ ಕಾಲೇಜಿನ ಅಧ್ಯಕ್ಷ ಚಂದ್ರಹಾಸ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.