ಬೆಂಗಳೂರು: ಸಿಐಡಿ ಎಸ್ ಪಿ ರವಿ ಡಿ ಚೆನ್ನಣ್ಣನವರ್ ಸೇರಿದಂತೆ ೯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ರಾಜ್ಯಸರ್ಕಾರ ಆದೇಶಿಸಿದೆ.
ಸಿಐಡಿಯಲ್ಲಿ ಎಸ್ ಪಿ ಯಾಗಿದ್ದ ರವಿ ಚೆನ್ನಣ್ಣನವರ್ ಅವರನ್ನು ವರ್ಗಾವಣೆ ಮಾಡಿದ್ದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಇನ್ನೂ ಸಿಐಡಿ ಎಸ್‌ಪಿ ಭೀಮಾಶಂಕರ್ ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಲಯದ ಡಿಸಿಪಿಯಾಗಿ, ಎಸಿಬಿ ಎಸ್‌ಪಿ ಅಬ್ದುಲ್ ಅಹಾದ್ ಅವರನ್ನು ಕೆಎಸ್‌ಆರ್‌ಟಿಸಿಯ ಭದ್ರತೆ ಮತ್ತು ವಿಚಕ್ಷಣಾ ದಳದ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.
ಕೊಪ್ಪಳ ಎಸ್‌ಪಿ ಟಿ. ಶ್ರೀಧರ್ ಅವರನ್ನು ಡಿಸಿಆರ್‌ಇ ಎಸ್‌ಪಿಯಾಗಿ. ಎಸಿಬಿ ಎಸ್‌ಪಿ ಅರುನಾಂಗ್‌ಶು ಗಿರಿ ಅವರನ್ನು ಕೊಪ್ಪಳ ಎಸ್‌ಪಿಯಾಗಿ, ಕಾರಾಗೃಹ ಇಲಾಖೆಯ ಎಸ್‌ಪಿ ಟಿ.ಪಿ. ಶಿವಕುಮಾರ್ ಅವರನ್ನು ಚಾಮರಾಜನಗರ ಎಸ್‌ಪಿಯಾಗಿ, ಚಾಮರಾಜನಗರ ಎಸ್‌ಪಿಯಾಗಿದ್ದ ದಿವ್ಯಾ ಸಾರಾ ಥಾಮಸ್ ಅವರನ್ನು ಮೈಸೂರು ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.
ಇನ್ನೂ ಸ್ಥಳ ನಿರೀಕ್ಷೆಯಲ್ಲಿದ್ದ ಐಪಿಎಸ್ ಅಧಿಕಾರಿ ಡೆಕ್ಕಾ ಸುರೇಶ್ ಬಾಬು ಅವರನ್ನು ಬೀದರ್ ಎಸ್‌ಪಿಯಾಗಿ ವರ್ಗಾಯಿಸಲಾಗಿದ್ದು ಬೀದರ್ ಎಸ್‌ಪಿ ನಾಗೇಶ್ ಡಿಎಲ್ ಅವರನ್ನು ಬೆಂಗಳೂರು ಸಿಐಡಿ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.
ರವಿ ಡಿ. ಚನ್ನಣ್ಣನವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ
