ಕಾರ್ಕಳ : ದುರ್ಗ ಗ್ರಾಮದ ತೆಳ್ಳಾರು ಬೆದ್ರಪಲ್ಕೆ ಹೊಸಹಿತ್ಲು ಪರಿಸರದಲ್ಲಿ 38 ಲಕ್ಷ ರೂ. ವೆಚ್ಚದ ಓವರ್ ಹೆಡ್ ಟ್ಯಾಂಕ್ ಗೆ ಧಾರ್ಮಿಕ ಮುಖಂಡ, ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ ಜ. 27ರಂದು ಗುದ್ದಲಿ ಪೂಜೆ ನಡೆಯಿತು.
ತೆಳ್ಳಾರಿನ ಬೆದ್ರಪಲ್ಕೆ ಮತ್ತು ಕಡೆಪೈರಾಲು ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುವಾಗಿ ಕಾಡಿತ್ತು. ಜಲಜೀವನ್ ಮಿಷನ್ ಯೋಜನೆಯಲ್ಲಿ ಈ ಎರಡೂ ಪ್ರದೇಶಗಳಿಗೆ ಅನುಕೂಲವಾಗುವ ಸ್ಥಳದಲ್ಲಿ ಕೊಳವೆ ಬಾವಿ ಹಾಗೂ ಅದಕ್ಕೆ ಹೊಂದಿಕೊಂಡಂತೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಲಿದೆ.
25 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್
ಈ ಟ್ಯಾಂಕ್ ಇಪ್ಪತ್ತೈದು ಸಾವಿರ ಲೀಟರ್ ಸಾಮರ್ಥ್ಯ ಹೊಂದಿದೆ. ಎತ್ತರ ಪ್ರದೇಶದಲ್ಲಿ ಟ್ಯಾಂಕ್ ನಿರ್ಮಾಣವಾಗುತ್ತಿರುವುದರಿಂದ ಈ ಭಾಗದ ಎಲ್ಲ ಮನೆಗಳಿಗೂ ನೀರು ವೇಗವಾಗಿ ಹರಿಯಲಿದೆ. ಪ್ರಸನ್ನ ಭಿಡೆ ವೈದಿಕ ಕಾರ್ಯ ನೆರವೇರಿಸಿದರು. ಗ್ರಾ.ಪಂ. ಅಧ್ಯಕ್ಷ ಸತೀಶ್ ನಾಯಕ್, ಪಂಚಾಯತ್ ಉಪಾಧ್ಯಕ್ಷೆ ಸುಶೀಲ, ಸದಸ್ಯರಾದ ದೇವಕಿ, ಸುಧಾಕರ ಪೂಜಾರಿ, ಸಂಧ್ಯಾ ಆಚಾರ್ಯ, ಮಾಜಿ ಅಧ್ಯಕ್ಷರಾದ ದಿನೇಶ್ ನಾಯಕ್, ಭಾಸ್ಕರ ಹೆಗ್ಡೆ ನಿಲೆಬೆಟ್ಟು, ಸತ್ಯನಾರಾಯಣ ಪಡ್ರೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.