Saturday, May 21, 2022
spot_img
Homeಸುದ್ದಿಟಾಟಾ ಗ್ರೂಪ್ ಗೆ ಏರ್ ಇಂಡಿಯಾ ಹಸ್ತಾಂತರಕ್ಕೆ ಸರ್ಕಾರದಿಂದ ಅಧಿಸೂಚನೆ

ಟಾಟಾ ಗ್ರೂಪ್ ಗೆ ಏರ್ ಇಂಡಿಯಾ ಹಸ್ತಾಂತರಕ್ಕೆ ಸರ್ಕಾರದಿಂದ ಅಧಿಸೂಚನೆ

ನವದೆಹಲಿ: ಟಾಟಾ ಗ್ರೂಪ್ ಗೆ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯನ್ನು ಹಸ್ತಾಂತರಿಸುವುದಕ್ಕೆ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.
ನಾನ್ ಕೋರ್ ಅಸೆಟ್ಸ್ ನ ವರ್ಗಾವಣೆಗಾಗಿ ಏರ್ ಇಂಡಿಯಾ ಹಾಗೂ ವಿಶೇಷ ಉದ್ದೇಶದ ವಾಹನ AIAHL ನಡುವೆ ಒಪ್ಪಂದಕ್ಕೆ ಭಾರತ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಟಾಟಾ ಸಮೂಹ 1932 ರಲ್ಲಿ ಸ್ಥಾಪಿಸಿದ್ದ ವೈಮಾನಿಕ ಸಂಸ್ಥೆಯನ್ನು ಈಗ ಸರ್ಕಾರದಿಂದ ಮರಳಿ ಪಡೆಯುತ್ತಿದೆ. ಕಳೆದ ಅಕ್ಟೋಬರ್ ನಲ್ಲಿ ಟಾಟಾ ಸಮೂಹದೊಂದಿಗೆ 18,000 ಕೋಟಿ ರೂಪಾಯಿಗಳಿಗೆ ಷೇರು ಮಾರಾಟ ಒಪ್ಪಂದಕ್ಕೆ ಸರ್ಕಾರ ಮುಂದಾಗಿತ್ತು. ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಒಪ್ಪಂದದ ನಗದು ವರ್ಗಾವಣೆಯಾಗಲಿದೆ. ಟಾಟಾ ಸಂಸ್ಥೆ 2,700 ಕೋಟಿ ರೂಪಾಯಿ ನಗದು ಪಾವತಿ ಮಾಡಲಿದ್ದು, ಏರ್ ಇಂಡಿಯಾ ಸಂಸ್ಥೆಯ 15,300 ಕೋಟಿ ರೂಪಾಯಿ ಸಾಲವನ್ನು ಭವಿಷ್ಯದಲ್ಲಿ ಪಾವತಿಸಬೇಕಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!