ಕಾರ್ಕಳ : ನೆಹರು ಯುವ ಕೇಂದ್ರ ಹಾಗೂ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನ ಸಂಯುಕ್ತ ಆಶ್ರಯದಲ್ಲಿ ಜ. 26ರಂದು ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ರಂಗಮಂದಿರದಲ್ಲಿ ಯುವ ಸ್ವಾಸ್ಥ್ಯ, ಧನಾತ್ಮಕ ಹಾಗೂ ಫಿಟ್ ಇಂಡಿಯಾ ತರಬೇತಿ ಕಾರ್ಯಾಗಾರ ಜರಗಿತು.
ನಂದಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಅಮೀನ್ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಂದಳಿಕೆಯ ಅಬ್ಬನಡ್ಕ ಪರಿಸರದಲ್ಲಿ ಯುವ ಜನರನ್ನು ಒಗ್ಗೂಡಿಸಿಕೊಂಡು ವಿವಿಧ ಕಾರ್ಯಾಗಾರ ನಡೆಸುತ್ತಿರುವ ಕ್ಲಬ್ನ ಕಾರ್ಯ ಶ್ಲಾಘನೀಯ. ಹೊಸ ಹೊಸ ಕಾರ್ಯಕ್ರಮ ಸಂಯೋಜಿಸುವ ಮೂಲಕ ಪ್ರೆಂಡ್ಸ್ ಕ್ಲಬ್ ರಾಜ್ಯದಲ್ಲೇ ಗುರುತಿಸಿಕೊಂಡಿದೆ ಎಂದರು.
ನಂದಳಿಕೆ ಅಬ್ಬನಡ್ಕ ಶ್ರೀದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ನಂದಳಿಕೆ ಗ್ರಾ.ಪಂ. ಸದಸ್ಯೆ ಅಬ್ಬನಡ್ಕ ಪದ್ಮಶ್ರೀ, ಸತೀಶ್ ಪೂಜಾರಿ, ಬೆಳ್ಮಣ್ಣು ಜೇಸಿಐ ಘಟಕದ ಅಧ್ಯಕ್ಷ ವೀಣೇಶ್ ಅಮೀನ್, ಉಡುಪಿ ನೆಹರು ಯುವ ಕೇಂದ್ರದ ವರ್ಷಿತಾ, ನಂದಳಿಕೆ ಅಬ್ಬನಡ್ಕ ಶ್ರೀದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ ಇನ್ನ ವಿಠಲ ಮೂಲ್ಯ, ಅಧ್ಯಕ್ಷ ಬೋಳ ಉದಯ ಅಂಚನ್, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫಿಟ್ ಇಂಡಿಯಾ ತರಬೇತಿಯಲ್ಲಿ ಯೋಗ ತರಬೇತುದಾರ ಅಬ್ಬನಡ್ಕ ಹರಿಪ್ರಸಾದ್ ಆಚಾರ್ಯ, ಜೇಸಿಐ ವಲಯ ತರಬೇತುದಾರ ಬೋಳ ಜಯಶ್ರೀ ಪ್ರಕಾಶ್ ಪೂಜಾರಿ, ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ದಿನೇಶ್ ಸುವರ್ಣ, ಕಾರ್ಕಳ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಶಿವಕುಮಾರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಸ್ವಾಗತಿಸಿ, ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುರೇಶ್ ಕಾಸ್ರಬೈಲು ವಂದಿಸಿದರು.