ಬೆಂಗಳೂರು: ಪರಿಷತ್ ವಿಪಕ್ಷ ನಾಯಕ ಸ್ಥಾನ ಇಬ್ರಾಹಿಂ ಕೈತಪ್ಪಿ ಬಿ.ಕೆ. ಹರಿಪ್ರಸಾದ್ ಪಾಲಾದ ಹಿನ್ನಲೆಯಲ್ಲಿ ರಾಜ್ಯ ನಾಯಕರ ನಡೆಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿಎಂ ಇಬ್ರಾಹಿಂ ಅಸಮಾಧಾನ ವ್ಯಕ್ತ ಪಡಿಸಿ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ.
ಜ. 27 ರಂದು ವರದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಗೂ ನನಗೂ ಮುಗಿದ ಅಧ್ಯಾಯ. ಸಿದ್ದರಾಮಯ್ಯರಿಂದ ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದೆ ಅದಕ್ಕಾಗಿ ದೇವೇಗೌಡ್ರನ್ನು ಬಿಟ್ಟು ಬಂದೆ. ಕುರುಬರನ್ನು ಸಿ.ಎಂ ಮಾಡಲು ಪ್ರಯತ್ನ ಪಟ್ಟೆ, ಚುನಾವಣೆ ಸಮಯದಲ್ಲಿ ಚಾಮುಂಡೇಶ್ವರಿಯಲ್ಲಿ ಸೋಲುತ್ತೀಯಾ ಎಂದು ಬಾದಾಮಿಯಲ್ಲಿ ನಿಲ್ಲಿಸಿ ಸಿದ್ದರಾಮಯ್ಯರನ್ನು ನಾನೇ ಗೆಲ್ಲಿಸಿದ್ದು. ಅದಕ್ಕಾಗಿ ಕಾಂಗ್ರೇಸ್ ನನಗೆ ಒಳ್ಳೆಯ ಉಪಕಾರ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಎಂಎಲ್ ಸಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಈ ಬಗ್ಗೆ ಆಪ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರಕ್ಕೆ ಬರುತ್ತೇನೆ. ಕಾಂಗ್ರೆಸ್ ಗೆ ಮುಸ್ಲಿಂ ಸಮುದಾಯವೇ ಮತದಾರರು. ಮುಸ್ಲಿಂ ಸಮುದಾಯದ ಸಹಕಾರ ಇಲ್ಲ ಅಂದ ಮೇಲೆ ಕಾಂಗ್ರೆಸ್ ಪರಿಸ್ಥಿತಿ ಹೀನಾಯವಾಗಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 80 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಅದಕ್ಕಿಂತಲೂ ಕಡಿಮೆ ಸ್ಥಾನಗಳು ಕಾಂಗ್ರೆಸ್ ಗೆ ಬರಲಿವೆ. ಕಾಂಗ್ರೆಸ್ ಗೆ ಕೊರೊನಾ ಬಂದಿದೆ, ಡೋಸ್ ಕೆಲಸ ಮಾಡುತ್ತಿಲ್ಲ 2023 ರಲ್ಲಿ ಸಮ್ಮಿಷ್ರ ಸರ್ಕಾರವಿರುತ್ತದೆ ಆಗ ನನ್ನ ಅನಿವಾರ್ಯತೆ ಏನೆಂದು ತಿಳಿಯುತ್ತದೆ. ಸಿದ್ದರಾಮಯ್ಯ, ಡಿಕೆಶಿ ಬಹಳ ದೊಡ್ಡವರು ಅದಕ್ಕಾಗಿ ಅವರು ನಮ್ಮಲ್ಲಿ ಮಾತನಾಡುವುದಿಲ್ಲ ಎಂದು ಹೇಳಿದರು.
ಸಿಎಂ ಇಬ್ರಾಹಿಂ ಕಾಂಗ್ರೆಸ್ ಗೆ ರಾಜಿನಾಮೆ
Recent Comments
ಕಗ್ಗದ ಸಂದೇಶ
on