ಡೆಹ್ರಾಡೂನ್: ಭಾರತಕ್ಕೆ ಎರಡು ಬಾರಿ ಒಲಂಪಿಕ್ಸ್ ಪದಕ ಗೆದ್ದುಕೊಟ್ಟ , ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಕಿ ಲೆಜೆಂಡ್ ಆಟಗಾರ ಚರಣ್ಜೀತ್ ಸಿಂಗ್ (92) ಗುರುವಾರ ನಿಧನರಾಗಿದ್ದಾರೆ.
ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ವಾಸವಿದ್ದ ಮಾಜಿ ಹಾಕಿ ಆಟಗಾರ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
1964 ರಲ್ಲಿ ಚರಣ್ಜಿತ್ ಸಿಂಗ್ಗೆ ನಾಯಕತ್ವವನ್ನು ನೀಡಿದಾಗ, ಮತ್ತೊಮ್ಮೆ ತಂಡವನ್ನು ಚಾಂಪಿಯನ್ ಮಾಡುವ ಅವಕಾಶವನ್ನು ಹೊಂದಿದ್ದರು. ಪಾಕಿಸ್ತಾನ ಫೈನಲ್ನಲ್ಲಿ ಭಾರತವನ್ನು ಸೋಲಿಸಿ ತನ್ನ ಸುವರ್ಣ ಪಯಣಕ್ಕೆ ಬ್ರೇಕ್ ಹಾಕಿತು. ಎರಡು ಡ್ರಾಗಳ ನಂತರ, ಲೀಗ್ ಹಂತದ ಉಳಿದ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಸೆಮಿಫೈನಲ್ಗೆ ಪ್ರವೇಶಿಸಿತು. ಇಲ್ಲಿ ಅವರು ಆಸ್ಟ್ರೇಲಿಯಾವನ್ನು 3-1 ಗೋಲುಗಳಿಂದ ಸೋಲಿಸಿದರು. ಈ ತಂಡ ಫೈನಲ್ನಲ್ಲಿ ಮತ್ತೆ ಪಾಕಿಸ್ತಾನದ ಎದುರು ನಿಂತಿತ್ತು. ಈ ಪಂದ್ಯದಲ್ಲಿ ಭಾರತ 1-0 ಅಂತರದಲ್ಲಿ ಪಾಕಿಸ್ತಾನವನ್ನು ಸೋಲಿಸಿತ್ತು. ಅದಲ್ಲದೇ ಅರ್ಜುನ ಪ್ರಶಸ್ತಿ ವಿಜೇತರೂ ಆಗಿದ್ದಾರೆ. ಹಾಗೂ 1960 ರಲ್ಲಿ ರೋಮ್ ನಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಭಾಗವಾಗಿದ್ದರು.
1929 ರ ನವೆಂಬರ್ 20 ರಂದು ಜನಿಸಿದ್ದ ಚರಣ್ಜೀತ್ ಸಿಂಗ್ ಡೆಹ್ರಾಡೂನ್ ನ ಕರ್ನಲ್ ಬ್ರೌನ್ ಕೇಂಬ್ರಿಡ್ಜ್ ಶಾಲೆ ಹಾಗೂ ಪಂಜಾಬ್ ವಿವಿಯಲ್ಲಿ ಕಲಿತಿದ್ದರು. ಅಂತಾರಾಷ್ಟ್ರೀಯ ಹಾಕಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಬಳಿಕ ಅವರು ಶಿಮ್ಲಾದ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಲ್ಲಿ ಭೌತಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಹಾಕಿ ಲೆಜೆಂಡ್ ಚರಣ್ ಜೀತ್ ಸಿಂಗ್ ನಿಧನ
Recent Comments
ಕಗ್ಗದ ಸಂದೇಶ
on