ಅಯ್ಯಪ್ಪನಗರ : ಲಾರಿ ಕಾರಿಗೆ ಡಿಕ್ಕಿ – ಪ್ರಯಾಣಿಕರಿಗೆ ಗಾಯ

ಕಾರ್ಕಳ : ಕುಕ್ಕುಂದೂರು ಗ್ರಾಮದ ಹಾರ್ಜಡ್ಡು ಕ್ರಾಸ್‌ ಬಳಿ ಕಾರಿಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಘಟನೆ ಜ. 26ರಂದು ಸಂಭವಿಸಿದ್ದು, ಕಾರು ಪ್ರಯಾಣಿಕರೋರ್ವರು ಗಾಯಗೊಂಡಿರುತ್ತಾರೆ. ರೋಷನ್‌, ಸಂತೋಷ್‌, ಸುದರ್ಶನ್‌ ಭಂಡಾರಿ, ಚಾಲಕ ರಂಜಿತ್‌ ಕಾರಿನಲ್ಲಿ (KA-20-P-4689) ಬೈಲೂರಿನಿಂದ ಕಾರ್ಕಳದ ಕಡೆಗೆ ಸಾಗುತ್ತಿದ್ದ ವೇಳೆ ಹಾರ್ಜಡ್ಡು ಎಂಬಲ್ಲಿ ಅಬ್ದುಲ್‌ ಫಾರೂಕ್‌ ಚಲಾಯಿಸುತ್ತಿದ್ದ ಅಶೋಕ್ ಲೈಲ್ಯಾಂಡ್ ಗೂಡ್ಸ್ ಲಾರಿ (KA-70-2318) ಡಿಕ್ಕಿ ಹೊಡೆದಿದ್ದು, ಕಾರಿನ ಹಿಂಬದಿ ಸೀಟ್‌ನಲ್ಲಿದ್ದ ಹಿರಿಯಂಗಡಿಯ ಸುದರ್ಶನ್ ಭಂಡಾರಿ ಗಾಯಗೊಂಡಿರುತ್ತಾರೆ. ಲಾರಿ ಚಾಲಕ ಯಾವುದೇ ಸೂಚನೆ ನೀಡದೇ ಹಾರ್ಜಡ್ಡು ಕ್ರಾಸ್‌ ತಿರುಗಿಸಿದ ಕಾರಣ ಅಪಘಾತ ಉಂಟಾಗಿದೆ ಎಂದು ಗಾಯಾಳು ಸುದರ್ಶನ್ ಭಂಡಾರಿ ಕಾರ್ಕಳ ನಗರ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top