ಕಾರ್ಕಳ-ಹೆಬ್ರಿ ತಾಲೂಕಿನಾದ್ಯಂತ ಗಣರಾಜ್ಯೋತ್ಸವ ಆಚರಣೆ

ಕಾರ್ಕಳ : ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಾದ್ಯಂತ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಕಳ ಗಾಂಧಿ ಮೈದಾನದಲ್ಲಿ ತಹಶೀಲ್ದಾರ್‌ ಕೆ. ಪುರಂದರ ಅವರು ಧ್ವಜಾರೋಹಣಗೈದು ಗಣರಾಜ್ಯೋತ್ಸವ ಸಂದೇಶ ನೀಡಿದರು. ಪುರಸಭಾ ಅಧ್ಯಕ್ಷೆ ಸುಮಾಕೇಶವ್‌, ಉಪಾ‍ಧ್ಯಕ್ಷೆ ಪಲ್ಲವಿ ಪ್ರವೀಣ್‌, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಜ್ಞಾನಸುಧಾ ಕಾಲೇಜು
ದೇಶದ ಏಳಿಗೆಗೆ ಪ್ರತಿಯೊಬ್ಬ ನಾಗರಿಕನ ತ್ಯಾಗದ ಅಗತ್ಯವಿದೆ – ಕ್ಯಾ. ಗಣೇಶ್ ಕಾರ್ಣಿಕ್
ಭವ್ಯಭಾರತದ ಹೆಮ್ಮೆಯ ಪ್ರಜೆಯಾಗಿ ಪ್ರತಿಯೊಬ್ಬರೂ ದೇಶದ ಒಳಿತಿಗಾಗಿ ಶ್ರದ್ಧೆ, ಕಾಯ, ವಾಚ, ಮನಸ ತೊಡಗಿಸಿಕೊಳ್ಳಬೇಕೆಂದು ವಿಧಾನ ಪರಿಷತ್‌ ನ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಕಾರ್ಕಳ ಜ್ಞಾನಸುಧಾ ಕಾಲೇಜಿನಲ್ಲಿ 73ನೇ ಗಣರಾಜ್ಯೊತ್ಸವದ ಧ್ವಜಾರೋಹಣಗೈದು ಮಾತನಾಡಿದರು. ಎಪಿಜಿಇಟಿ ಟ್ರಸ್ಟಿ ಕರುಣಾಕರ ಶೆಟ್ಟಿ, ಕೆಜೆಎಸ್‍ಪಿಯು ಪ್ರಿನ್ಸಿಪಾಲ್ ದಿನೇಶ್ ಕೊಡವೂರು, ಯುಜೆಎಸ್‍ಪಿಯು ಪ್ರಿನ್ಸಿಪಾಲ್ ಗಣೇಶ್ ಶೆಟ್ಟಿ, ಜೆಇಎಂಎಚ್‍ಎಸ್ ಪ್ರಿನ್ಸಿಪಾಲ್ ಉಷಾ ರಾವ್ ಯು., ವೈಸ್ ಪ್ರಿನ್ಸಿಪಾಲ್ ಸಾಹಿತ್ಯ, ಸಂತೋಷ್, ವಾಣಿ ಕೆ., ಪಿಆರ್‍ಒ ಜ್ಯೋತಿ ಪದ್ಮನಾಭ ಭಂಡಿ, ಎನ್‍ಸಿಸಿ ಅಧಿಕಾರಿ ಸುಮಿತ್ ಇ. ಉಪಸ್ಥಿತರಿದ್ದರು. ‌

ಕ್ರಿಯೇಟಿವ್‌ ಕಾಲೇಜು
ಸಂವಿಧಾನದ ಆಶಯ ಈಡೇರಿಸೋಣ – ಪವನಂಜಯ್‌ ಎನ್.‌

ಸಂವಿಧಾನದ ಆಶಯವನ್ನು ನಾವೆಲ್ಲರೂ ಒಂದಾಗಿ ಈಡೇರಿಸೋಣವೆಂದು ಭಾರತೀಯ ಸೇವೆಯ ನಿವೃತ್ತ ಅಧಿಕಾರಿ ಪವನಂಜಯ್‌ ಎನ್.‌ ಅಭಿಪ್ರಾಯಪಟ್ಟರು.
ಅವರು ಹಿರ್ಗಾನದಲ್ಲಿರುವ ಕ್ರಿಯೇಟಿವ್ ಪ.ಪೂ. ಕಾಲೇಜಿನಲ್ಲಿ ಧ್ವಜಾರೋಹಣಗೈದು ಮಾತನಾಡಿದರು. ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಅಶ್ವಥ್ ಎಸ್.ಎಲ್., ಗಣನಾಥ ಶೆಟ್ಟಿ, ಗಣಪತಿ ಭಟ್ ಕೆ. ಎಸ್.‌ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.
ಆಂಗ್ಲ ಭಾಷಾ ಉಪನ್ಯಾಸಕ ರಾಜೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ನಿಟ್ಟೆ ವಿದ್ಯಾಸಂಸ್ಥೆ
ದೇಶದ ಬೆಳವಣಿಗೆಯಲ್ಲಿ ನಮ್ಮ ಪಾತ್ರದ ಬಗ್ಗೆ ಅರಿಯಬೇಕು- ಮುನಿರಾಜ ರೆಂಜಾಳ
ನಿಟ್ಟೆ: ದೇಶದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಚಿಂತಿಸಬೇಕು ಎಂದು ಮೂಡಬಿದ್ರೆಯ ಜೈನ್ ಪ್ರೌಢ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಮುನಿರಾಜ ರೆಂಜಾಳ ಅಭಿಪ್ರಾಯಪಟ್ಟರು.
ನಿಟ್ಟೆ ಸಮೂಹ ವಿದ್ಯಾಸಂಸ್ಥೆ ವತಿಯಿಂದ ಬಿಸಿ ಆಳ್ವ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿದ್ದ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರಧ್ವಜಾರೋಹಣಗೈದು ಮಾತನಾಡಿದರು. ದೇಶದ ಪ್ರಜ್ಞಾವಂತ ಪ್ರತಿಯೋರ್ವ ಪ್ರಜೆಯೂ ತಲೆಯೆತ್ತಿ ಗೌರವಿಸುವಂತಹ ಶ್ರೇಷ್ಠತೆ ರಾಷ್ಟ್ರ ಧ್ವಜಕ್ಕೆ ಇದೆ. ಅಂತೆಯೇ ಜಾತಿ, ಮತ ಬೇಧವನ್ನ ಮೀರಿ ಗೌರಿವಿಸಿ ಅನುಸರಿಸುವ ಪಾವಿತ್ರ್ಯತೆ ಸಂವಿಧಾನವೆಂಬ ಗ್ರಂಥಕ್ಕಿದೆ. ನಾವು ಈ ದಿನ ಅಂತಹ ಒಂದು ಗ್ರಂಥ ಬರೆಯುವಲ್ಲಿ ಸಾಧನೆಗೈದ ಪ್ರತಿಯೋರ್ವರನ್ನೂ ಗೌರವ ಪೂರ್ವಕವಾಗಿ ನೆನಪಿಸಿಕೊಳ್ಳಬೇಕೆಂದರು.
ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಶಿಕ್ಷಕವೃಂದ, ಶಿಕ್ಷಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಿಟ್ಟೆ ತಾಂತ್ರಿಕ ಕಾಲೇಜಿನ ಎನ್.ಸಿ.ಸಿ. ನೇವಲ್ ಘಟಕದ ವತಿಯಿಂದ ಆಕರ್ಷಕ ಪಥಸಂಚಲನ ನಡೆಯಿತು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್ ಸ್ವಾಗತಿಸಿ, ನಿಟ್ಟೆ ತಾಂತ್ರಿಕ ಕಾಲೇಜಿನ ಎನ್.ಸಿ.ಸಿ. ನೇವಲ್ ಘಟಕದ ಸಂಯೋಜಕ ಡಾ. ಶಿವಪ್ರಸಾದ್ ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಣ ಸಲಹೆಗಾರ್ತಿ ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಭುವನೇಂದ್ರ ಪ್ರೌಢಶಾಲೆ
ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ವಾಮನ ಕಾಮತ್ ಧ್ವಜರೋಹಣಗೈದರು. ಸಂಸ್ಥೆಯ ಮುಖ್ಯಶಿಕ್ಷಕಿ ವೃಂದಾ ಶೆಣೈ ಗಣರಾಜ್ಯೋತ್ಸವ ಆಚರಣೆಯ ಮಹತ್ವ ಮತ್ತು ಅದರ ಪಾವಿತ್ರ್ಯತೆ ಕುರಿತು ತಿಳಿಸಿದರು.
ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ವಿದ್ಯಾ ಕಿಣಿ ಉಪಸ್ಥಿತರಿದ್ದರು. ಪ್ರೌಡ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಎನ್ ಸಿ ಸಿ ಕ್ಯಾಪ್ಟನ್ ಸಂಜಯ್ ಕುಮಾರ್ ನಿರೂಪಿಸಿ, ವಂದಿಸಿದರು.

ಪ್ರಕೃತಿ ಶಿಕ್ಷಣ ಸಂಸ್ಥೆ

ಪ್ರಕೃತಿ ಶಿಕ್ಷಣ ಸಂಸ್ಥೆಯಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ವಲಯದ ನಿರ್ದೇಶಕರು ಮತ್ತು ಬ್ರಹ್ಮಾವರ ಕೃಷಿ ಸಲಹಾ ಸಮಿತಿಯ ನಿರ್ದೇಶಕರಾಗಿರುವಂತಹ ಪ್ರಗತಿಪರ ಕೃಷಿಕ ಗೋಪಾಲ ಕೆ. ಪೂಜಾರಿಯವರು ಧ್ವಜಾರೋಹಣ ಮಾಡಿದರು. ನಂತರ ಪ್ರಕೃತಿ ವಿದ್ಯಾರ್ಥಿ ನಿಲಯದ ಕೈ ತೋಟಕ್ಕೆ ಗಿಡ ನೆಡುವುದರ ಮೂಲಕ ಚಾಲನೆಯನ್ನು ನೀಡಿ ಗಣರಾಜ್ಯೋತ್ಸವದ ಆಚರಣೆಗೆ ವಿಶೇಷವಾದ ಮಹತ್ವವನ್ನು ನೀಡಿದರು. ತೋಟಗಾರಿಕಾ ಬೆಳೆಗಳನ್ನು ಬೆಳೆಸಲು ಸಾವಯವ ಗೊಬ್ಬರ ತಯಾರಿಸುವ ವಿಧಾನ ಹಾಗೂ ಅದರ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ತನ್ನ ಮನೆಯಲ್ಲಿ ಒಂದೊಂದು ಔಷಧೀಯ ಗಿಡವನ್ನು ನೆಟ್ಟು ಬೆಳೆಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳು ಹಾಗೂ ಪ್ರಾಂಶುಪಾಲರು ಶಿಕ್ಷಕ ವೃಂದದವರು, ಮೇಲ್ವಿಚಾರಕರಾದ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು. ಗಣಿತ ಉಪನ್ಯಾಸಕಿ ಸುಭಾಷಿಣಿ ಸ್ವಾಗತಿಸಿ, ಉಪನ್ಯಾಸಕಿಯಾದ ಅಕ್ಷತಾರವರು ಕಾರ್ಯಕ್ರಮ ನಿರೂಪಿಸಿ, ಕನ್ನಡ ಶಿಕ್ಷಕಿ ಸವಿತಾರವರು ವಂದಿಸಿದರು.





























































































































































































































error: Content is protected !!
Scroll to Top